ಸರ್ಕಾರಿ ಯೋಜನೆ ಸದುಪಯೋಗ ಪಡೆದುಕೊಳ್ಳಿ

ಪ್ರಧಾನ ಮಂತ್ರಿ ವಿಶ್ವಕರ್ಮ ಜಾಗೃತಿ ಕಾರ್ಯಕ್ರಮವನ್ನು ಹನುಮಂತರಾಯ ಉದ್ಘಾಟಿಸಿದರು. ಆರ್.ಐಶ್ವರ್ಯ, ಡಾ.ರೂಪ ಇತರರಿದ್ದರು.
ಪ್ರಧಾನ ಮಂತ್ರಿ ವಿಶ್ವಕರ್ಮ ಜಾಗೃತಿ ಕಾರ್ಯಕ್ರಮವನ್ನು ಹನುಮಂತರಾಯ ಉದ್ಘಾಟಿಸಿದರು. ಆರ್.ಐಶ್ವರ್ಯ, ಡಾ.ರೂಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ಯೋಜನೆಗಳ ಉಪಯೋಗ ಪಡೆಯಿರಿ
  • ಪ್ರಧಾನ ಮಂತ್ರಿ ವಿಶ್ವಕರ್ಮ ಜಾಗೃತಿ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ

ಕೂಡ್ಲಿಗಿ: ಪ್ರತಿಯೊಬ್ಬರಿಗೂ ಸರ್ಕಾರಿ ಯೋಜನೆ ತಲುಪಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ತಹಸೀಲ್ದಾರ್ ಟಿ.ಜಗದೀಶ್ ಹೇಳಿದರು.


ತಾಲೂಕಿನ ಗುಡೇಕೋಟೆಯ ಪಾರ್ವತಿ ಪರಮೇಶ್ವರ ದೇವಾಸ್ಥಾನದ ಸಮುದಾಯ ಭವನದಲ್ಲಿ ತಾಲೂಕು ಆಡಳಿತ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಪಿಂಚಣಿ ಅದಾಲತ್‌ನಲ್ಲಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.

ಅರ್ಹರು ಕಂದಾಯ ಇಲಾಖೆಯ ಅಂಗವಿಕಲ, ವಿಧವಾ, ಸಂಧ್ಯಾ ಸುರಕ್ಷಾ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಅನರ್ಹರು ಯೋಜನೆಯ ಲಾಭ ಪಡೆಯುತ್ತಿದ್ದರೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.


ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಮಂಜೂರಾತಿ ಪತ್ರ ವಿತರಿಸಲಾಯಿತು. ತಹಸೀಲ್ದಾರ್ ಟಿ.ಜಗದೀಶ್, ಗ್ರೇಡ್ -2 ತಹಸೀಲ್ದಾರ್ ಜಿ.ಎಂ.ಕುಮಾರಸ್ವಾಮಿ, ಗುಡೇಕೋಟೆ ಗ್ರಾಪಂ ಅಧ್ಯಕ್ಷ ಎನ್. ಕೃಷ್ಣ, ಕಂದಾಯ ನಿರೀಕ್ಷಕ ಚೌಡಪ್ಪ ಹೊನ್ನಾಳ ಮಾತನಾಡಿದರು.

ಗ್ರಾಮಾಡಳಿತಾಧಿಕಾರಿ ರಾಮದುರ್ಗ ಮರುಳಸಿದ್ದಪ್ಪ, ಕಂದಾಯ ಅಧಿಕಾರಿಗಳಾದ ಹುರಳಿಹಾಳ್ ವೀರೇಶ,ಶ್ರೀನಿವಾಸ್ ಕೊಂಡಿ,ಶೋಭಾ, ನಾಗವೇಣಿ, ಮಂಜುಳಾ, ಮಂಜುನಾಥ್, ಗ್ರಾಮ ಸಹಾಯಕರಾದ ತುಮಲೇಶ್, ಕೃಷ್ಣಮೂರ್ತಿ, ಸುಂದರಕೃಷ್ಣ, ನಾಗೇಂದ್ರಪ್ಪ, ಕೊಟ್ರೇಶ್, ವೆಂಕಟೇಶ್, ಭೀಮಣ್ಣ, ಅಂಜಿನಪ್ಪ, ಸಿದ್ದಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net