ನಾಗಲಾಪುರ, ಗಂಗಲಾಪುರ, ಬನ್ನಿಹಟ್ಟಿ, ಲಿಂಗದಳ್ಳಿ ಗ್ರಾಮದ 300ರಿಂದ 350 ವಿದ್ಯಾರ್ಥಿಗಳು ಬನ್ನಿಹಟ್ಟಿ ಕ್ರಾಸ್‌ನಿಂದ ಸಂಡೂರು ಇಲ್ಲವೇ ಬಳ್ಳಾರಿಗೆ ಶಾಲೆ-ಕಾಲೇಜಿಗೆ ತೆರಳುತ್ತಾರೆ. ದಾವಣಗೆರೆ, ಮಂತ್ರಾಲಯ, ಹರಿಹರ ಬಸ್‌ನಲ್ಲಿ ಕಡಿಮೆ ಸಂಖ್ಯೆಯ ಪ್ರಯಾಣಿಕರಿದ್ದರೂ ನಿಲ್ಲಿಸುವುದಿಲ್ಲ. ಕೂಡ್ಲಿಗಿ ಹಾಗೂ ಸಂಡೂರು ಡಿಪೋ ಬಸ್‌ಗಳು ಮಾತ್ರ ನಿಲ್ಲಿಸುತ್ತವೆ. ಆದರೆ, ಈ ಬಸ್‌ಗಳು 9.30ರ ನಂತರ ಬರುತ್ತವೆ. ಈ ಬಸ್‌ನಲ್ಲಿ ಶಾಲೆ, ಕಾಲೇಜಿಗೆ ಹೋಗುವುದರೊಳಗೆ ತರಗತಿಗಳು ಆರಂಭವಾಗಿರುತ್ತವೆ. ತಡವಾಗಿ ಹೋದರೆ ಶಾಲೆ, ಕಾಲೇಜುಗಳಲ್ಲಿ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.