ಕಳಪೆ ತಂಪುಪಾನೀಯ ಮಾರಾಟಗಾರರ ವಿರುದ್ಧ ಕ್ರಮವಹಿಸಿ

ಕಂಪ್ಲಿ ಸಮೀಪದ ಎಮ್ಮಿಗನೂರು ರೈತ ಸಂಘದ ಕಚೇರಿಯಲ್ಲಿ ಹುಳುಗಳಿರುವ ಕುಡಿವ ನೀರಿನ ಬಾಟಲ್, ಅವಧಿ ಮೀರಿದ ಕೂಲ್ಡ್ರಿಂಕ್ಸ್ ಪ್ರದರ್ಶಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ವಿ.ವೀರೇಶ್, ಎಸ್ಡಿಎಂಸಿ ಅಧ್ಯಕ್ಷ ಬಿ.ರಾಜು ಇದ್ದರು.
ಕಂಪ್ಲಿ ಸಮೀಪದ ಎಮ್ಮಿಗನೂರು ರೈತ ಸಂಘದ ಕಚೇರಿಯಲ್ಲಿ ಹುಳುಗಳಿರುವ ಕುಡಿವ ನೀರಿನ ಬಾಟಲ್, ಅವಧಿ ಮೀರಿದ ಕೂಲ್ಡ್ರಿಂಕ್ಸ್ ಪ್ರದರ್ಶಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ವಿ.ವೀರೇಶ್, ಎಸ್ಡಿಎಂಸಿ ಅಧ್ಯಕ್ಷ ಬಿ.ರಾಜು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದ ತಾಲೂಕು ಅಧ್ಯಕ್ಷ ವಿ.ವೀರೇಶ್ ಆಗ್ರಹ
  • ಎಮ್ಮಿಗನೂರಿನಲ್ಲಿ ರೈತರ ಸಭೆ
ಕಂಪ್ಲಿ: ಸಮೀಪದ ಎಮ್ಮಿಗನೂರು ಗ್ರಾಮದಲ್ಲಿ ನಕಲಿ, ಕಳಪೆ ಗುಣಮಟ್ಟದ, ಹುಳು ಇರುವ ಕುಡಿವ ನೀರಿನ ಬಾಟಲ್, ಅವಧಿ ಮೀರಿದ ತಂಪುಪಾನೀಯ ಮಾರಾಟ ಮಾಡುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ವಿ.ವೀರೇಶ್ ಆರೋಪಿಸಿದರು.
ಗ್ರಾಮದ ರೈತ ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ರೈತರ ಸಭೆಯಲ್ಲಿ ಮಾತನಾಡಿದರು. ಕೆಲ ದಿನಗಳ ಹಿಂದೆ ಕಳಪೆ ಗುಣಮಟ್ಟದ ಕೂಲ್ಡ್ರಿಂಕ್ಸ್ ಕುಡಿದ ಬಾಲಕನೊಬ್ಬ ಅಸ್ವಸ್ಥನಾಗಿದ್ದು, ಪ್ರಕರಣವನ್ನು ಮುಚ್ಚಿಹಾಕಿದ್ದಾರೆ. ಗ್ರಾಮದಲ್ಲಿ ತಯಾರಾಗುವ ಕುಡಿವ ನೀರಿನಲ್ಲಿ ಹುಳು ಕಾಣಿಸುತ್ತಿವೆ. ಅವಧಿ ಮೀರಿದ್ದರೂ ನೀರಿನ ಬಾಟಲ್ ಮಾರಲಾಗುತ್ತಿದೆ. ಜನರ ಆರೋಗ್ಯ ಕಾಪಾಡುವಲ್ಲಿ ಗ್ರಾಮಾಡಳಿತ, ತಾಲೂಕು ಆಡಳಿತ ನಿಗಾವಹಿಸಬೇಕು. ಕಳಪೆ ಗುಣಮಟ್ಟದ ನಕಲಿ ನೀರಿನ ಬಾಟಲ್,
ಕೂಲ್ಡ್ರಿಂಕ್ಸ್, ಕಳಪೆ ಗೊಬ್ಬರ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಪರವಾನಗಿ ನೀಡಿದ್ದಲ್ಲಿ ಪರಿಶೀಲಿಸಿ ರದ್ದುಪಡಿಸಿ ತಪ್ಪಿತಸ್ಥರನ್ನು ಬಂಧಿಸಬೇಕು. ವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಏ.7ರಂದು ಗ್ರಾಮದಿಂದ ಡಿಸಿ ಕಚೇರಿ ವರೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಎಸ್ಡಿಎಂಸಿ ಅಧ್ಯಕ್ಷ ಬಿ.ರಾಜು, ಪ್ರಮುಖರಾದ ಬಿ.ಸದಾಶಿವಪ್ಪ, ಸಿ.ಬಾಷಸಾಬ್, ಎಸ್.ರಾಮಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net