ಸೇವೆಯಿಂದ ವ್ಯವಸ್ಥೆ ಸುಧಾರಣೆ

ಸಿರಗುಪ್ಪದ ಡ್ರೈವರ್ ಕಾಲನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ವನ್ನು ನಗರಸಭೆ ಪೌರಾಯುಕ್ತ ಕೆ.ಗಂಗಾಧರ ಉದ್ಘಾಟಿಸಿದರು. ಪ್ರಾಚಾರ್ಯ ಕೃಷ್ಣಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷ ಎನ್.ಸಿದ್ದಪ್ಪ, ನಗರಸಭೆ ಎಇಇ ದಿಲೀಪ್ ಇತರರಿದ್ದರು.
ಸಿರಗುಪ್ಪದ ಡ್ರೈವರ್ ಕಾಲನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ವನ್ನು ನಗರಸಭೆ ಪೌರಾಯುಕ್ತ ಕೆ.ಗಂಗಾಧರ ಉದ್ಘಾಟಿಸಿದರು. ಪ್ರಾಚಾರ್ಯ ಕೃಷ್ಣಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷ ಎನ್.ಸಿದ್ದಪ್ಪ, ನಗರಸಭೆ ಎಇಇ ದಿಲೀಪ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿರಗುಪ್ಪ ನಗರಸಭೆ ಪೌರಾಯುಕ್ತ ಕೆ.ಗಂಗಾಧರ ಅಭಿಮತ
ಸಿರಗುಪ್ಪ: ವಿಕಸಿತ ಭಾರತದೆಡೆಗೆ ಯುವಜನತೆ ಸಾಗಬೇಕಾದರೆ ಸಮರ್ಪಣ ಭಾವ ಅಗತ್ಯ. ಸಮಾಜಸೇವೆ ಮಾಡುವುದನ್ನು ಕುಟುಂಬದಿಂದಲೇ ಕಲಿತಾಗ ವ್ಯವಸ್ಥೆ ಸುಧಾರಿಸಲು ಸಾಧ್ಯ ಎಂದು ನಗರಸಭೆ ಪೌರಾಯುಕ್ತ ಕೆ.ಗಂಗಾಧರ ಅಭಿಪ್ರಾಯಪಟ್ಟರು.
ಪಟ್ಟಣದ ಡ್ರೈವರ್ ಕಾಲನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಎ ಮತ್ತು ಬಿ ಘಟಕಗಳಿಂದ ಶುಕ್ರವಾರ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದರು. ಪರಿಸರವನ್ನು ಮುಂದಿನ ತಲೆಮಾರುಗಳಿಗೂ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ನಗರದ ರಸ್ತೆಗಳು, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ಹಾಗೂ ಮಾಲಿನ್ಯ ಮುಕ್ತವಾಗಿರಿಸಿ ನಗರದ ಅಭಿವೃದ್ಧಿಗೆ ಶ್ರಮಿಸುವಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ನಗರಸಭೆಯ ಸಮುದಾಯ ಸಂಘಟಕರು ಕಸ ವಿಂಗಡಣೆ, ಸ್ವಚ್ಛತೆ ಕುರಿತು ಶಿಬಿರಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿದರು. ಪ್ರಾಚಾರ್ಯ ಕೃಷ್ಣಪ್ಪ, ಎಸ್ಡಿಎಂಸಿ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎನ್.ಸಿದ್ದಪ್ಪ, ನಗರಸಭೆ ಎಇಇ ದಿಲೀಪ್, ಶಿಬಿರದ ಅಧಿಕಾರಿಗಳಾದ ಡಾ.ಕೆ.ಎಂ.ಚಂದ್ರಕಾಂತ್, ಬಕಾಡೆ ಪಂಪಾಪತಿ, ಸಹ ಶಿಬಿರಾಧಿಕಾರಿ ಟಿ.ಎಸ್.ಪ್ರಶಾಂತ್ ಬಾಬು, ಉಪನ್ಯಾಸಕರಾದ ರಾಮಣ್ಣ ಪೂಜಾರಿ, ಎನ್.ಸುರೇಶ್, ನರೇಶ್, ಸ್ವಸಹಾಯ ಗುಂಪುಗಳ ಸದಸ್ಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net