ಪರಿಕರಗಳ ಕೊರತೆ : ಅಥ್ಲೆಟಿಕ್ ಕ್ರೀಡೆಗಳಲ್ಲಿ 100, 200, 400, 1500 ಮೀಟರ್, ಐದು ಹಾಗೂ ಹತ್ತು ಸಾವಿರ ಓಟಗಳಿವೆ. ಜತೆಗೆ 21 ಕಿ.ಮೀ. ಮ್ಯಾರಥಾನ್ ಓಟವೂ ಬರಲಿದೆ. ಇವುಗಳೊಂದಿಗೆ ಡಿಸ್ಕ್ ಥ್ರೋ, ಜಾವಲಿನ್ ಥ್ರೋ, ಹ್ಯಾಮರ್ ಥ್ರೋ, ಶಾಟ್‌ಫುಟ್, ಹೈ ಜಂಪ್, ಲಾಂಗ್ ಜಂಪ್, ತ್ರಿಪಲ್ ಜಂಪ್, ಪೋಲ್ ವಾಲ್ಟ್ ಸೇರಿ ಹಲವಾರು ಕ್ರೀಡೆಗಳು ಬರಲಿವೆ. ಆದರೆ, ಕ್ರೀಡೆಗಳು ಹಾಗೂ ಟ್ರಾೃಕ್‌ಗೆ ತಕ್ಕಂತೆ ಇಲ್ಲಿನ ಕ್ರೀಡಾ ಇಲಾಖೆಯಲ್ಲಿ ಪರಿಕರಗಳು ಸಮರ್ಪಕವಾಗಿಲ್ಲ ಎನ್ನಲಾಗುತ್ತಿದೆ.