ಮುಖ್ಯಾಧಿಕಾರಿ-ಇಂಜಿನಿಯರ್ ಅಮಾನತುಗೊಳಿಸಿ

ಕಂಪ್ಲಿ ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಕಚೇರಿಯಲ್ಲಿ ಆಯೋಜಿಸಿದ್ದ ಬಿಜೆಪಿ ಸಭೆಯಲ್ಲಿ ಬಿಎಲ್‌ಎ-1 ಜಿ.ಶ್ರೀನಿವಾಸುಲು ಮಾತನಾಡಿದರು.
ಕಂಪ್ಲಿ ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಕಚೇರಿಯಲ್ಲಿ ಆಯೋಜಿಸಿದ್ದ ಬಿಜೆಪಿ ಸಭೆಯಲ್ಲಿ ಬಿಎಲ್‌ಎ-1 ಜಿ.ಶ್ರೀನಿವಾಸುಲು ಮಾತನಾಡಿದರು.
Published on
ಕಂಪ್ಲಿ: ಪಟ್ಟಣದ ಕೋಟೆ ಪ್ರದೇಶದಲ್ಲಿ ತುಂಗಭದ್ರಾ ಸೇತುವೆ ಬಳಿ ಸ್ವಾಗತ ಫಲಕ ಅಳವಡಿಸುವಾಗ ಫಲಕ ಬಿದ್ದು ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ 50 ಲಕ್ಷ ರೂಪಾಯಿ, ಗಾಯಗೊಂಡವರಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡುವಲ್ಲಿ ಸರ್ಕಾರ ಮುಂದಾಗಬೇಕು ಎಂದು ಬಿಜೆಪಿ ಬಿಎಲ್‌ಎ-1 ಜಿ.ಶ್ರೀನಿವಾಸುಲು ಆಗ್ರಹಿಸಿದರು.
ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಕಚೇರಿ ಆವರಣದಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ನಾಮಫಲಕ ಅಳವಡಿಕೆಗೆ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಪ್ರಭಾರ ಮುಖ್ಯಾಧಿಕಾರಿ, ಇಂಜಿನಿಯರ್‌ನನ್ನು ಅಮಾನತುಗೊಳಿಸಬೇಕು. ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಂಪ್ಲಿ ಉತ್ಸವ ನೆಪದಲ್ಲಿ ತರಾತುರಿಯಲ್ಲಿ ನಾಮಫಲಕ ಅಳವಡಿಸಲು ಮುಂದಾಗಿದ್ದು, ನಾಮಫಲಕ ನವೀಕರಣದಲ್ಲಿ ಪುರಸಭೆ ಅನುದಾನ ದುರ್ಬಳಕೆ ಆಗಿದೆ. ಪುರಸಭೆಗೆ ಕೆಎಂಎಎಸ್ ದರ್ಜೆಯ ಮುಖ್ಯಾಧಿಕಾರಿಯನ್ನು ನೇಮಕಗೊಳಿಸಬೇಕು. ಉದಾಸೀನ ತೋರಿದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಯುವ ಮೋರ್ಚಾ ಮಂಡಲ ಉಪಾಧ್ಯಕ್ಷ ಎನ್.ಮನೋಜಗೌಡ, ಮಂಡಲ ಪ್ರಧಾನ ಕಾರ್ಯದರ್ಶಿ ಕೆ.ಪ್ರಶಾಂತ, ನಗರ ಉಪಾಧ್ಯಕ್ಷ ಎಂ.ಭಾಸ್ಕರ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಬಸವಪ್ರಭು, ಕಟ್ಟೆ ವಿಶ್ವನಾಥ, ಕಾರ್ಯಕರ್ತರಾದ ಸಿ.ಎ.ಚನ್ನಪ್ಪ, ಶಂಶುದ್ದೀನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net