ಸರ್ಕಾರಿ ಜಮೀನಿನ ಸಮೀಕ್ಷೆ

ಸಿರಗುಪ್ಪ ತಾಲೂಕಿನ ಹಳೇಕೋಟೆ-64 ಗ್ರಾಮ ವ್ಯಾಪ್ತಿಯಲ್ಲಿ ತಾಲೂಕು ಆಡಳಿತದಿಂದ ಸರ್ಕಾರಿ ಭೂಮಿಯ ಸರ್ವೇ ಕಾರ್ಯ ನಡೆಯಿತು.
ಸಿರಗುಪ್ಪ ತಾಲೂಕಿನ ಹಳೇಕೋಟೆ-64 ಗ್ರಾಮ ವ್ಯಾಪ್ತಿಯಲ್ಲಿ ತಾಲೂಕು ಆಡಳಿತದಿಂದ ಸರ್ಕಾರಿ ಭೂಮಿಯ ಸರ್ವೇ ಕಾರ್ಯ ನಡೆಯಿತು.
Published on
ಸಿರಗುಪ್ಪ: ತಾಲೂಕಿನ ಹಳೇಕೋಟೆ-64 ಗ್ರಾಮ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 150ಎ ಬಳಿ ಇರುವ ಸರ್ಕಾರಿ ಭೂಮಿಯ ಸರ್ವೇ ಕಾರ್ಯ ಮಂಗಳವಾರ ತಾಲೂಕು ಆಡಳಿತದಿಂದ ನಡೆಯಿತು.
ಈ ಸರ್ಕಾರಿ ಭೂಮಿಯಲ್ಲಿ ಎಂಟು ಎಕರೆ ಭೂಮಿಯನ್ನು ಕಾರ್ಮಿಕ ಇಲಾಖೆಯ ವಸತಿ ಶಾಲೆಗೆ, ಮೂರು ಎಕರೆ ವಾಲ್ಮೀಕಿ ವಸತಿ ಶಾಲೆಗೆ, 2.50 ಎಕರೆ ಕಂದಾಯ ಭವನ ನಿರ್ಮಾಣಕ್ಕೆ, ಎಂಟು ಎಕರೆ ನವೋದಯ ವಸತಿ ಶಾಲೆಗೆ ಒಟ್ಟು 22.17 ಎಕರೆ ಭೂಮಿಯ ಸರ್ವೇ ಕಾರ್ಯವನ್ನು ತಾಲೂಕು ಸರ್ವೇಯರ್ ಸಮ್ಮುಖದಲ್ಲಿ ನಡೆಸಲಾಯಿತು.
ಈ ಭೂಮಿಯಲ್ಲಿ ರೈತರಾದ ವಲಿಸಾಬ್ 1.25 ಎಕರೆ, ಹಸೇನ್ ಸಾಬ್ 1.50 ಎಕರೆ, ಖಾಜಾಸಾಬ್ 0.50 ಸೆಂಟ್ಸ್, ಗುರೆಳ್ಳು ಸಣ್ಣ ವೀರೇಶ, ಗುರೆಳ್ಳು ದೊಡ್ಡ ಈರಯ್ಯ ತಲಾ 1.25 ಎಕರೆ, ಜಂಬಣ್ಣ, ಪೂಜಾರಿ ಈರಯ್ಯ, ಕಂಬಳೆಪ್ಪ ಸಾಗುವಳಿ ಮಾಡುತ್ತಿದ್ದಾರೆ. ಈಗ ಈ ಭೂಮಿಯನ್ನು ಕಿತ್ತು ಕೊಂಡರೆ ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net