

ಪ್ರಮುಖ ಮುಖ್ಯಾಂಶಗಳು
ಕಾನಹೊಸಹಳ್ಳಿ: ಪ್ರಜಾಪ್ರಭುತ್ವ ಆಶಯದ ಮೌಲ್ಯಗಳು ಪರಿಣಾಮಕಾರಿ ಬಳಕೆಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಕಂದಾಯ ನಿರೀಕ್ಷಕ ಅಂದಾನಗೌಡ ಹೇಳಿದರು.
ನಾಡಕಚೇರಿಯಲ್ಲಿ ಶನಿವಾರ 80ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಶೈಕ್ಷಣಿಕ, ವೈಜ್ಞಾನಿಕ ಮತ್ತು ಆರ್ಥಿಕ ಪ್ರಗತಿಯಿಂದ ಸ್ವಾತಂತ್ರ್ಯದ ಮೌಲ್ಯ ಹೆಚ್ಚುತ್ತದೆ. ಉತ್ತಮ ಶಿಕ್ಷಣ ಪಡೆದು ವೈಜ್ಞಾನಿಕ ಚಿಂತನೆಗಳಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಉಪ ತಹಸೀಲ್ದಾರ್ ಮದ್ಲಿಲೇಟ್, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಜಿ.ಸಿದ್ದನಗೌಡ, ಮಾಜಿ ಉಪಾಧ್ಯಕ್ಷೆ ಲಕ್ಷೀ, ನಿವೃತ್ತ ಶಿಕ್ಷಕರಾದ ಕೊಟ್ರೇಶ್, ಮಹಾದೇವಪ್ಪ, ಹೇಮಂತ್, ಗ್ರಾಮಲೆಕ್ಕಿಗ ಕೋಟ್ರೇಶ್, ಪ್ರಮುಖರಾದ ಶ್ರೀನಿವಾಸ್‌ಕೊಂಡಿ, ಚನ್ನಬಸಯ್ಯ ಇಮ್ರಾನ್, ದೇವಿಂದ್ರನಾಯ್ಕ, ಸಂಪ್ರೀತಾ ಇದ್ದರು.