ಕೃಷಿ ಪಂಪ್‌ಸೆಟ್‌ಗಳಿಗೆ ತ್ರಿ-ಫೇಸ್ ವಿದ್ಯುತ್ ಪೂರೈಸಿ

ಸಂಡೂರು ತಾಲೂಕು ತೋರಣಗಲ್ ಹೋಬಳಿಯ ಜೆಸ್ಕಾಂ ಕಚೇರಿಯ ಸೆಕ್ಷನ್ ಅಧಿಕಾರಿ ಸಾಯಿಪ್ರಸಾದ್‌ಗೆ ಕರ್ನಾಟಕ ಪ್ರಾಂತ ರೈತಸಂಘದಿಂದ ಮನವಿ ಸಲ್ಲಿಸಲಾಯಿತು. ಜಿಲ್ಲಾ ಉಪಾಧ್ಯಕ್ಷ ಜೆ.ಎಂ.ಚನ್ನಬಸಯ್ಯ, ತಾಲೂಕು ಅಧ್ಯಕ್ಷ ಜಿ.ಪಂಪನಗೌಡ, ಎನ್.ಶಂಕಣ್ಣ, ಪ್ರಮುಖರಾದ ಆರ್.ಮಂಜುನಾಥ, ಯು.ಅಂಜಿನಿ, ಸೂರ್ಯರೆಡ್ಡಿ, ಹಳ್ಳದರಾಯ, ಕೆ.ರುದ್ರಗೌಡ ಇತರರಿದ್ದರು.
ಸಂಡೂರು ತಾಲೂಕು ತೋರಣಗಲ್ ಹೋಬಳಿಯ ಜೆಸ್ಕಾಂ ಕಚೇರಿಯ ಸೆಕ್ಷನ್ ಅಧಿಕಾರಿ ಸಾಯಿಪ್ರಸಾದ್‌ಗೆ ಕರ್ನಾಟಕ ಪ್ರಾಂತ ರೈತಸಂಘದಿಂದ ಮನವಿ ಸಲ್ಲಿಸಲಾಯಿತು. ಜಿಲ್ಲಾ ಉಪಾಧ್ಯಕ್ಷ ಜೆ.ಎಂ.ಚನ್ನಬಸಯ್ಯ, ತಾಲೂಕು ಅಧ್ಯಕ್ಷ ಜಿ.ಪಂಪನಗೌಡ, ಎನ್.ಶಂಕಣ್ಣ, ಪ್ರಮುಖರಾದ ಆರ್.ಮಂಜುನಾಥ, ಯು.ಅಂಜಿನಿ, ಸೂರ್ಯರೆಡ್ಡಿ, ಹಳ್ಳದರಾಯ, ಕೆ.ರುದ್ರಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೆಸ್ಕಾಂ ಕಚೇರಿ ಸೆಕ್ಷನ್ ಅಧಿಕಾರಿ ಸಾಯಿಪ್ರಸಾದ್‌ಗೆ ಮನವಿ
ಸಂಡೂರು: ಈ ವರ್ಷ ಮುಂಗಾರು ಮಳೆ ಕೊರತೆಯಾಗಿದ್ದು, ಬಿತ್ತನೆ ಪ್ರಮಾಣ ಕುಸಿದಿದೆ. ಮಳೆ ಇಲ್ಲದೆ ಜನ-ಜಾನುವಾರುಗಳಿಗೆ ಬರದ ಛಾಯೆ ಆವರಿಸಿದೆ. ಆದ್ದರಿಂದ ತಾಲೂಕಿನ ಕೃಷಿ ಪಂಪ್ ಸೆಟ್‌ಗಳಿಗೆ ನಿರಂತರ ವಿದ್ಯುತ್ ಒದಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತಸಂಘದಿಂದ ತೋರಣಗಲ್ ಹೋಬಳಿಯ ಜೆಸ್ಕಾಂ ಕಚೇರಿ ಸೆಕ್ಷನ್ ಅಧಿಕಾರಿ ಸಾಯಿಪ್ರಸಾದ್‌ಗೆ ಸೋಮವಾರ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಜೆ.ಎಂ.ಚನ್ನಬಸಯ್ಯ ಮಾತನಾಡಿ, ಕೊಳವೆ ಬಾವಿಗಳ ನೀರನ್ನು ಬಳಸಿಕೊಂಡು ಅವಶ್ಯ ಬೆಳೆಗಳನ್ನು ರೈತರು ಬೆಳೆದಿದ್ದಾರೆ. ಆದರೆ, ಬೋರ್‌ವೆಲ್, ಪಂಪ್‌ಸೆಟ್‌ಗಳ ಮೂಲಕ ಬೆಳೆಗಳಿಗೆ ನೀರು ಹರಿಸಲು ವಿದ್ಯುತ್ ಸಮಸ್ಯೆ ಎದುರಾಗಿದೆ. ವಿದ್ಯುತ್ ಕಡಿತ ಹಾಗೂ ಲೋಡ್ ಶೆಡ್ಡಿಂಗ್‌ನಿಂದ ತಾಲೂಕಿನ ಗ್ರಾಮೀಣ ಭಾಗದ ಪಂಪ್‌ಸೆಟ್‌ಗಳಿಗೆ ನಿಯಮಾನುಸಾರ 7ಗಂಟೆಗಳ ಕಾಲ ನಿರಂತರ ತ್ರಿ-ಫೇಸ್ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದ ಬೆಳೆಗೆ ಸರಿಯಾಗಿ ನೀರು ಹರಿಸಲಾಗುತ್ತಿಲ್ಲ.
ಸಾಲ ಮಾಡಿ ದುಬಾರಿ ಬೀಜ ಹಾಗೂ ಗೊಬ್ಬರ ಹಾಕಿ ಬಿತ್ತಿದ ಬೆಳೆಗಳು ಒಣಗುತ್ತಿವೆ. ಬೆಳೆ ಕೈಗೆ ಬರುವ ಹಂತದಲ್ಲಿ ವಿದ್ಯುತ್ ಸಮಸ್ಯೆಯಿಂದ ನೀರು ಹರಿಸಲಾಗದೆ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ. ಕುಡಿವ ನೀರಿಗೂ ತೊಂದರೆಯಾಗುತ್ತಿದೆ. ರಾತ್ರಿ ಸಮಯದಲ್ಲಿ ವಿದ್ಯುತ್ ನೀಡದ ಕಾರಣ ಕಾಡು ಪ್ರಾಣಿಗಳ ದಾಳಿಗೆ ರೈತರು ಬಲಿಯಾಗುತ್ತಿದ್ದಾರೆ. ತಾಲೂಕಿನಾದ್ಯಂತ ಸೋಲಾರ್-ವಿಂಡೋ, ವಿದ್ಯುತ್ ಸ್ಥಾವರಗಳು ಹಬ್ಬಿಕೊಂಡಿದ್ದು, ಹೆಚ್ಚು ವಿದ್ಯುತ್ ಉತ್ಪಾದನೆಯಾಗುತ್ತಿದೆ. ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ರೈತರಿಗೆ ತ್ರಿ-ಫೇಸ್ ವಿದ್ಯುತ್ ನೀಡಬೇಕು. ಇಲ್ಲದಿದ್ದರೆ ಬೆಳೆ ನಷ್ಟಕ್ಕೆ ಇಲಾಖೆಯೆ ಜವಾಬ್ದಾರಿಯಾಗಲಿದೆ ಎಂದು ಎಚ್ಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net