ನಕಲಿ ಪ್ರಮಾಣ ಪತ್ರ ಸಲ್ಲಿಕೆ

ನಕಲಿ ಪ್ರಮಾಣ ಪತ್ರ ಸಲ್ಲಿಕೆ
ನಕಲಿ ಪ್ರಮಾಣ ಪತ್ರ ಸಲ್ಲಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಆಡಳಿತ ಮಂಡಳಿ ವಿರುದ್ಧ ದೂರು
ಬಳ್ಳಾರಿ : ಕಾಲೇಜು ಪ್ರಾರಂಭಿಸಲು ಆಗ್ನಿಶಾಮಕ ಇಲಾಖೆಯ ನಕಲಿ ನಿರಾಕ್ಷೇಪಣಾ ಪ್ರಮಾಣಪತ್ರ(ಎನ್‌ಒಸಿ) ಸೃಷ್ಟಿಸಿ ಸಲ್ಲಿಸಿದ ಆರೋಪದಡಿ ಇಲ್ಲಿನ ಐಡಿಪಿಎಸ್ ಸ್ವತಂತ್ರ ಪಿಯು ಕಾಲೇಜು ಆಡಳಿತ ಮಂಡಳಿ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯಲು ಜಿಲ್ಲಾ ಆಗ್ನಿಶಾಮಕ ಅಧಿಕಾರಿ ಸಹಿ ಮತ್ತು ಮೊಹರನ್ನು ನಕಲು ಮಾಡಿ ನಕಲಿ ಪ್ರಮಾಣಪತ್ರ ಸೃಷ್ಠಿಸಿದ್ದರು. ಈ ದಾಖಲೆಯನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಲಾಗಿತ್ತು. ಇಲಾಖೆಯು ಪರೀಕ್ಷಿಸಿದಾಗ ನಕಲಿ ಎಂಬುದಾಗಿ ತಿಳಿದು ಬಂದಿದೆ. ಕಾಲೇಜು ಆಡಳಿತ ಮಂಡಳಿ ವಿರುದ್ಧ ದೂರು ದಾಖಲಾಗಿದೆ.
==
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net