ಬಳ್ಳಾರಿ : ನಿಜವಾದ ಸನಾತನ ಧರ್ಮದ ಬಗ್ಗೆ ತಿಳಿಯಬೇಕೆಂದರೆ, ವೇದಗಳ ಅಧ್ಯಯನ ಮಾಡಬೇಕು ಎಂದು ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ಪಾಂಚಜನ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿವೇಕ ಮಂಟಪ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದರು. ಸನಾತನ ಧರ್ಮ ದೇವರ ಕೇಂದ್ರೀತ ಧರ್ಮವಲ್ಲ, ಮಾನವ ಕೇಂದ್ರಿತ ಧರ್ಮವಾಗಿದೆ. ಬಹುತ್ವವೇ ಸನಾತನ ಧರ್ಮದ ತಳಹದಿ, ಬಹುತ್ವದ ಆಧಾರದ ಮೇಲೆ ಸನಾತನ ಭಾರತೀಯ ಸಂಸ್ಕೃತಿ ನಿಂತಿದೆ. ಇದನ್ನು ಅರಿಯದೆ ಬಹಳಷ್ಟು ಜನ ಕೇವಲ ಆಚರಣೆಗಳನ್ನೇ ಧರ್ಮ ಎಂದುಕೊಂಡಿದ್ದಾರೆ ಎಂದರು.