ಹಗರಿಬೊಮ್ಮನಹಳ್ಳಿಯ ಗಂಗಾವತಿ ವೆಂಕಟರಮಣ ಪಂಚರತ್ನಮ್ಮ ಪದ್ಮಾವತೆಮ್ಮನವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಹಳೇ ವಿದ್ಯಾರ್ಥಿಗಳ ಸ್ನೇಹ ಮಿಲನ, ಗುರುವಂದನಾ ಕಾರ್ಯಕ್ರಮದಲ್ಲಿ ಉಪನ್ಯಾಸಕರಿಗೆ ಸನ್ಮಾನಿಸಲಾಯಿತು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ, ಪ್ರಮುಖರಾದ ಕೆ.ಎಂ.ಶಿವಕುಮಾರ್, ಬೆಟ್ಟಪ್ಪ, ವಾಣಿಶ್ರೀ, ನಾಗಲಕ್ಷ್ಮೀ, ನೀಲಪ್ಪ, ಗುಡ್ಡಪ್ಪ, ರೇವಣಸಿದ್ದನಗೌಡ, ಡಿ.ಕೆ.ಇಬ್ರಾಹಿಂ ಇತರರಿದ್ದರು.
ಹಗರಿಬೊಮ್ಮನಹಳ್ಳಿ: ವಿದ್ಯಾರ್ಥಿಗಳು ಕ್ರೀಯಾಶೀಲರಾಗಿದ್ದರೆ ಉಪನ್ಯಾಸಕರು ಎಚ್ಚರಿಕೆಯಿಂದ ಅಧ್ಯಯನಶೀಲರಾಗಿ ಇರಬೇಕಾಗುತ್ತದೆ ಎಂದು ನಿವೃತ್ತ ಪ್ರಾಚಾರ್ಯ ತು.ಕ.ಶಂಕ್ರಯ್ಯ ಹೇಳಿದರು.
ಗಂಗಾವತಿ ವೆಂಕಟರಮಣ ಪಂಚರತ್ನಮ್ಮ ಪದ್ಮಾವತೆಮ್ಮನವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಭಾನುವಾರ 1996-1999 ಸಾಲಿನ ವಿದ್ಯಾರ್ಥಿಗಳ ಸ್ನೇಹ ಮಿಲನ, ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳ ಚಟುವಟಿಕೆಯೇ ಉಪನ್ಯಾಸಕರಿಗೆ ಲವಲವಿಕೆ ಎಂದರು. ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಪನ್ನಂಗದರ ಮಾತನಾಡಿ, ವಿದ್ಯಾರ್ಥಿಗಳ ಗುರು ಭಕ್ತಿಗೆ ಕೊನೇ ಇಲ್ಲ. ಎಲ್ಲೇ ಕಂಡರು ವಿದ್ಯಾರ್ಥಿಗಳು ತೋರುವ ಗೌರವ ಶಿಕ್ಷಕ ವೃತ್ತಿ ಜೀವನ ಸಾರ್ಥಕವೆನಿಸುತ್ತದೆ. ನಮ್ಮ ವಿದ್ಯಾರ್ಥಿಗಳು ಇಂದು ಸಮಾಜ ಮುಖಿಯಾಗಿರುವುದು ಸಂತಸದ ಸಂಗತಿ ಎಂದರು.