ವಿದ್ಯಾರ್ಥಿ ಆತ್ಮಹತ್ಯೆ, ಪ್ರಾಧ್ಯಾಪಕನ ವಿರುದ್ಧ ದೂರು ದಾಖಲು

ವಿದ್ಯಾರ್ಥಿ ಆತ್ಮಹತ್ಯೆ, ಪ್ರಾಧ್ಯಾಪಕನ ವಿರುದ್ಧ ದೂರು ದಾಖಲು
ವಿದ್ಯಾರ್ಥಿ ಆತ್ಮಹತ್ಯೆ, ಪ್ರಾಧ್ಯಾಪಕನ ವಿರುದ್ಧ ದೂರು ದಾಖಲು
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಧ್ಯಾಪಕ
ಬಳ್ಳಾರಿ : ನಗರದ ಪ್ರತಿಷ್ಠಿತ ಸಂಜಯ್ ಗಾಂಧಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಧ್ಯಾಪಕನ ವಿರುದ್ಧ ದೂರು ದಾಖಲಾಗಿದೆ.
ಇಲ್ಲಿನ ಗುಗ್ಗರಹಟ್ಟಿಯ ನಿವಾಸಿ, ಡಿಪ್ಲೋಮಾ ಮೆಕ್ಯಾನಿಕ್ ವಿಭಾಗದ ನಾಲ್ಕನೇ ಸೆಮಿಸ್ಟರ್ ನ ವಿದ್ಯಾರ್ಥಿ ಅರವಿಂದ ಮೃತ. ಅರವಿಂದನ ನಡವಳಿಕೆ ಬಗ್ಗೆ ಅಂಬರೀಶ ಅವರು ಆಕ್ಷೇಪಿಸಿದ್ದರು ಎನ್ನಲಾಗಿದೆ. ಪಾಲಕರನ್ನು ಕರೆದು ಅವರ ಎದುರೇ ಬುದ್ಧಿ ಹೇಳಿದ್ದರು ಎಂದು ಗೊತ್ತಾಗಿದೆ. ಮಾ. 10ರಂದು ಕಾಲೇಜಿನಲ್ಲಿ ಗಲಾಟೆಯಾಗಿದ್ದು, ಆಗಲೂ ಪಾಲಕರನ್ನು ಕರೆದು ಉಪನ್ಯಾಸಕ ಅಂಬರೀಶ ಅವರು ಅರವಿಂದನ ಬಗ್ಗೆ ದೂರು ಹೇಳಿದ್ದರು. ಕಾಲೇಜಿನಿಂದ ಹೊರಹಾಕುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂಬುದಾಗಿ ಎಪಿಎಂಸಿ ಠಾಣೆಯಲ್ಲಿ ಪಾಲಕರು ದೂರಿನಲ್ಲಿ ವಿವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net