ಹಿಂದೂ ಪರಂಪರೆ-ಸಂಸ್ಕೃತಿ ಉಳಿವಿಗೆ ಶ್ರಮಿಸಿ

ಸಿರಗುಪ್ಪದಲ್ಲಿ ಹಿಂದೂ ಸಮ್ಮೇಳನ ಸಂಚಾಲನ ಸಮಿತಿಯಿಂದ ಆಯೋಜಿಸಿದ್ದ ವಿರಾಟ ಹಿಂದೂ ಸಮ್ಮೇಳನವನ್ನು ಹಾಲ್ವಿ ಮಠದ ಮಹಾಂತ ಸ್ವಾಮೀಜಿ ಉದ್ಘಾಟಿಸಿದರು. ಬಸವಭೂಷಣ ಸ್ವಾಮೀಜಿ, ಸುರೇಂದ್ರ ಸ್ವಾಮೀಜಿ, ನಿವೃತ್ತ ಬ್ಯಾಂಕ್ ಅಧಿಕಾರಿ ಎಸ್ ಗುರುರಾಜ, ವಾಗ್ಮಿ ಹಾರಿಕಾ ಮಂಜುನಾಥ ಇತರರಿದ್ದರು.
ಸಿರಗುಪ್ಪದಲ್ಲಿ ಹಿಂದೂ ಸಮ್ಮೇಳನ ಸಂಚಾಲನ ಸಮಿತಿಯಿಂದ ಆಯೋಜಿಸಿದ್ದ ವಿರಾಟ ಹಿಂದೂ ಸಮ್ಮೇಳನವನ್ನು ಹಾಲ್ವಿ ಮಠದ ಮಹಾಂತ ಸ್ವಾಮೀಜಿ ಉದ್ಘಾಟಿಸಿದರು. ಬಸವಭೂಷಣ ಸ್ವಾಮೀಜಿ, ಸುರೇಂದ್ರ ಸ್ವಾಮೀಜಿ, ನಿವೃತ್ತ ಬ್ಯಾಂಕ್ ಅಧಿಕಾರಿ ಎಸ್ ಗುರುರಾಜ, ವಾಗ್ಮಿ ಹಾರಿಕಾ ಮಂಜುನಾಥ ಇತರರಿದ್ದರು.
Published on
ಸಿರಗುಪ್ಪ: ಸನಾತನ ಧರ್ಮದ ಉಳಿವಿಗೆ ಭಾರತೀಯ ನೆಲದ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹಾಲ್ವಿ ಮಠದ ಅಭಿನವ ಮಹಾಂತ ಸ್ವಾಮೀಜಿ ಹೇಳಿದರು.
ನಗರದಲ್ಲಿ ಹಿಂದೂ ಸಮ್ಮೇಳನ ಸಂಚಾಲನ ಸಮಿತಿ ಮಂಡಲ ಘಟಕ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನದ ಆವಿಷ್ಕಾರಗಳಿಂದ ಸನಾತನ ಧರ್ಮಗಳ ಆಚಾರ, ವಿಚಾರಗಳನ್ನು ಮರೆತಿರುವ ಹಿನ್ನೆಲೆಯಲ್ಲಿ ಈ ಕುರಿತು ಎಚ್ಚರಿಸುವಲ್ಲಿ ಹಿಂದೂ ಸಮ್ಮೇಳನಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ವಾಗ್ಮಿ ಹಾರಿಕಾ ಮಂಜುನಾಥ ಮಾತನಾಡಿ, ಪ್ರತಿಯೊಬ್ಬ ತಂದೆ-ತಾಯಿ ಮಕ್ಕಳಿಗೆ ಮೊದಲು ಸಂಸ್ಕಾರ ಕಲಿಸಿ ನಂತರ ವಿದ್ಯೆ ಕಲಿಸಬೇಕು. ಐದನೇ ತರಗತಿಯಲ್ಲಿ ರಾಮಾಯಣ, ಹತ್ತನೇ ತರಗತಿಯಲ್ಲಿ ಮಹಾಭಾರತ, 12ನೇ ತರಗತಿಗೆ ಭಗವದ್ಗೀತೆಗಳ ಅಧ್ಯಯನ ಮಾಡಿಸುವ ಮೂಲಕ ಮಕ್ಕಳಲ್ಲಿ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸಿ ಮುಂದಿನ ತಲೆಮಾರಿನವರಲ್ಲಿ ಧರ್ಮರಕ್ಷಣೆ ಕುರಿತು ಜಾಗೃತಿ ಮೂಡಿಸಬೇಕಾದ ಕರ್ತವ್ಯ ನಮ್ಮ ಮೇಲಿದೆ.
ಪಟ್ಟಣದ ಪ್ಯಾಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭವಾದ ಶೋಭಾಯಾತ್ರೆ ಪ್ರಮುಖ ಬೀದಿಗಳ ಮೂಲಕ ಸಂಚರಿಸಿತು. ಭಾರತಾಂಬೆ ಭಾವಚಿತ್ರ, ಕಳಸ ಹೊತ್ತ ಮಹಿಳೆಯರು, ಮಹಾತ್ಮರ ವೇಷ ಧರಿಸಿದ ಶಾಲಾ ಮಕ್ಕಳು ಶೋಭಾಯಾತ್ರೆಯ ಕಳೆ ಹೆಚ್ಚಿಸಿದರು. 972 ಜನರ ನೇತ್ರದಾನವನ್ನು ಮಾಡಿಸಿದ ನಿಸ್ವಾರ್ಥ ಸೇವೆಗೆ ಕೋಟೇಶ್ವರ ರಾವ್, ಸಿರುಗುಪ್ಪದಿಂದ ಕಾಶಿ- ರಾಮೇಶ್ವರಕ್ಕೆ ಪಾದಯಾತ್ರೆ ಮಾಡಿದ ಗೋಪಾಲ ಶೆಟ್ಟಿ, ಸಾವಯುವ ಕೃಷಿಕ ಬಿ.ಎಂ.ವೀರಪ್ಪಯ್ಯ ಅವರನ್ನು ಸನ್ಮಾನಿಸಲಾಯಿತು.
ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ ಹಾಗೂ ಕರಸ್ಥಳ ನಾಗಲಿಂಗೇಶ್ವರ ಮಠದ ಸುರೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಲೂಕು ಸಂಚಾಲನ ಸಮಿತಿ ಅಧ್ಯಕ್ಷ ಕಿರಣ್ ಜೈನ್, ಉಪಾಧ್ಯಕ್ಷ ಸದಾಶಿವ, ನಿವೃತ್ತ ಬ್ಯಾಂಕ್ ಅಧಿಕಾರಿ ಎಸ್.ಗುರುರಾಜ, ಚಾಗಿ ಸುಬ್ಬಯ್ಯ ಶೆಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net