ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿ

ಬಳ್ಳಾರಿಯ ಅಲ್ಲಿಪುರ ಮಹಾದೇವ ತಾತನ ಮಠದಲ್ಲಿ ಆಯೋಜಿಸಿದ್ದ ಚಿಪ್ಪಿಗ ಸಮಾಜದ 14ನೇ ಸರ್ವ ಸದಸ್ಯರ ಸಭೆಯ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷ  ಡಾ. ಶಂಕರ ಜಿರಂಕಳಿ ಉದ್ಘಾಟಿಸಿದರು. ಸಮಾಜದ ಮುಖಂಡರಾದ ಜವಳಿ ಬಾಬಣ್ಣ, ಬಣಗಾರ ಚಂದ್ರಪ್ಪ, ಜಡೆ ಮರೆಣ್ಣ, ಸುರೇಶ್ ನಾಗಲೀಕರ್, ಯಶವಂತ್, ವೀರೇಶ್ ,  ಕಲ್ಪನಾ ಜಿರಂಕಳಿ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಅಭಿವೃದ್ಧಿ
ಬಳ್ಳಾರಿ : ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪಾಲಕರು ಶ್ರಮಿಸಬೇಕು ಎಂದು ಚಿಪ್ಪಿಗ ಸಮಾಜದ ಜಿಲ್ಲಾಧ್ಯಕ್ಷ ಡಾ. ಶಂಕರ ಜಿರಂಕಳಿ ಹೇಳಿದರು.
ನಗರದ ಅಲ್ಲಿಪುರ ಮಹಾದೇವ ತಾತನ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚಿಪ್ಪಿಗ ಸಮಾಜದ 14ನೇ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು. ಸಮಾಜ ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಸದೃಢವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯು, ಸಿಇಟಿ ಹಾಗೂ ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ದಿವಂಗತ ಜಂತಕಲ್ ರಾಚಪ್ಪ ಅವರಿಗೆ ಚಿಪ್ಪಿಗ ಶರಣರತ್ನ ಪ್ರಶಸ್ತಿಯನ್ನು ಅವರ ಕುಟುಂಬದ ಸದಸ್ಯರಿಗೆ ನೀಡಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಸಮಾಜದ ಹಿರಿಯರಿಗೆ ಸನ್ಮಾನಿಸಲಾಯಿತು. ನಂತರ ಸಮಾಜದ ವಾರ್ಷಿಕ ವರದಿ ಮಂಡಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net