ನಗರದ ರಾಯಲ್ ವೃತ್ತ, ದುರ್ಗಮ್ಮ ಗುಡಿ ವೃತ್ತ, ಸಂಗಮ್ ಸರ್ಕಲ್, ಬೆಂಗಳೂರು ರಸ್ತೆ, ತಾಳೂರು ರಸ್ತೆ, ಇನ್‌ಫ್ಯಾಂಟ್ರಿ ರಸ್ತೆ ಅಕ್ರಮಿಸಿಕೊಂಡವರಿಗೆ ಪಾಲಿಕೆ ಅಧಿಕಾರಿಗಳು ಶಿಸ್ತಿನ ಪಾಠ ಹೇಳುತ್ತಿದ್ದಾರೆ. ಜೆಸಿಬಿ ವಾಹನದ ಮುಖಾಂತರ ಪೆಟ್ಟಿಗೆ ಅಂಗಡಿ ತೆರವುಗೊಳಿಸುತ್ತಿದ್ದಾರೆ. ಫುಟಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಈಗಷ್ಟೇ ಪ್ರಾರಂಭಿಸಿದ್ದು, ಮುಂದುವರಿಯಲಿದೆ ಎಂಬುದಾಗಿ ಪಾಲಿಕೆ ಅಧಿಕಾರಿಗಳು ಖಚಿತವಾಗಿ ನುಡಿಯುತ್ತಿದ್ದಾರೆ. ಆದರೆ, ಬೀದಿ ಬದಿ ವ್ಯಾಪಾರಿಗಳಿಗೆ ಒಂದು ಶಾಶ್ವತ ನೆಲೆ ಕಲ್ಪಿಸಲು ಮಾತ್ರ ಈವರೆಗೂ ಸಾಧ್ಯವಾಗಿಲ್ಲ.