ಬಿಮ್ಸ್‌ನಲ್ಲಿ ಬೀದಿ ನಾಟಕ ಪ್ರದರ್ಶನ

ಬಳ್ಳಾರಿಯ ಬಿಮ್ಸ್ ಆವರಣದಲ್ಲಿ ರಾಷ್ಟ್ರೀಯ ಶಸ್ತ್ರಚಿಕಿತ್ಸಕರ ಸಾಪ್ತಾಹಿಕ ಆಚರಣೆ ಅಂಗವಾಗಿ ಬೀದಿ ನಾಟಕ ಪ್ರದರ್ಶನ ನಡೆಯಿತು.
ಬಳ್ಳಾರಿಯ ಬಿಮ್ಸ್ ಆವರಣದಲ್ಲಿ ರಾಷ್ಟ್ರೀಯ ಶಸ್ತ್ರಚಿಕಿತ್ಸಕರ ಸಾಪ್ತಾಹಿಕ ಆಚರಣೆ ಅಂಗವಾಗಿ ಬೀದಿ ನಾಟಕ ಪ್ರದರ್ಶನ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಶಸ್ತ್ರಚಿಕಿತ್ಸಕರ ಸಾಪ್ತಾಹಿಕ ಆಚರಣೆ
  • ಚಪ್ಪಾಳೆಗಳ ಮುಖಾಂತರ ಪ್ರಶಂಸೆ
ಬಳ್ಳಾರಿ : ಇಲ್ಲಿನ ಬಿಮ್ಸ್ ಆವರಣದಲ್ಲಿ ರಾಷ್ಟ್ರೀಯ ಶಸ್ತ್ರಚಿಕಿತ್ಸಕರ ಸಾಪ್ತಾಹಿಕ ಆಚರಣೆ ಅಂಗವಾಗಿ ಭಾರತೀಯ ಶಸ್ತಚಿಕಿತ್ಸಕರ ಸಂಘದ ವತಿಯಿಂದ ಮಂಗಳವಾರ ಬೀದಿ ನಾಟಕ ಪ್ರದರ್ಶನ ನಡೆಯಿತು.
ಸಾರ್ವಜನಿಕರಲ್ಲಿ ಹೃದಯದ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಮಹತ್ತರ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಪ್ರಥಮ, ದ್ವಿತೀಯ ವರ್ಷದ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳು ಅತ್ಯಂತ ಯಶಸ್ವಿಯಾಗಿ ಬೀದಿ ನಾಟಕವನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.
ತುರ್ತು ಚಿಕಿತ್ಸಾ ವಿಭಾಗಕ್ಕೆ ಆಗಮಿಸಿದ್ದ ನೂರಾರು ಸಾರ್ವಜನಿಕರು ಶಾಂತಚಿತ್ತರಾಗಿ ಬೀದಿ ನಾಟಕವನ್ನು ವೀಕ್ಷಿಸಿದರು. ವಿದ್ಯಾರ್ಥಿಗಳ ಅಭಿನಯ ಹಾಗೂ ಸಂದೇಶಕ್ಕೆ ಚಪ್ಪಾಳೆಗಳ ಮುಖಾಂತರ ಪ್ರಶಂಸೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕೆಎಸ್‌ಸಿಎಎಸ್‌ಐ ಶಾಖೆಯ ಜಿಲ್ಲಾಧ್ಯಕ್ಷ ಡಾ.ಶೇಕಪ್ಪ ಮಾಳಗಿಮನಿ, ಕಾರ್ಯದರ್ಶಿ ಡಾ.ಗುಡೇಕೋಟೆ ರವಿಕುಮಾರ, ಜಂಟಿ ಕಾರ್ಯದರ್ಶಿ ಡಾ.ಶೈಖ್ ಫರ್ಹಾನ್ ಎಂ.ಬಿ., ಎಎಸ್‌ಐ ರಾಷ್ಟ್ರೀಯ ಕಾರ್ಯದರ್ಶಿ ಡಾ.ದಿವಾಕರ್ ಗಡ್ಡಿ ಉಪಸ್ಥಿತರಿದ್ದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net