ಮಂಗಳವಾರ ಬೆಳಗ್ಗೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಿತ್ಯದಂತೆ ಶುದ್ಧ ನೀರಿನ ವಾಹನವನ್ನು ತರಲು ತೋಟದ ಕಡೆಗೆ ನಡೆದು ಕೊಂಡು ಹೋಗುತ್ತಿದ್ದ ವೇಳೆ ನಾಯಿ ಗಳು ಆಕ್ರಮಣ ಮಾಡಿವೆ. ಇವುಗಳನ್ನು ಬೆದರಿಸಲು ಸಾಧ್ಯವಾಗದೆ ನೆಲಕ್ಕುರುಳಿದ ಅವರ ಎಡಗೈ ಬೆರಳು, ಬಲಗೈ ಹಾಗೂ ಕಾಲುಗಳನ್ನು ನಾಯಿಗಳು ಕಚ್ಚಿ ಗಾಯಗೊಳಿಸಿದೆ. ಚೀರಾಟ ಕೇಳಿ ಬಂದ ಕುರಿಗಾಹಿಗಳು ನಾಯಿಯನ್ನು ಓಡಿಸಿ ಜೀವ ಉಳಿಸಿದ್ದಾರೆ. ಮಂಜುನಾಥ ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಗುಣ ಮುಖರಾಗುತ್ತಿದ್ದಾರೆ.