ಬಲವಂತದ ಭೂಸ್ವಾಧೀನ ಕೈಬಿಡಲಿ

ಸಂಡೂರು ತಾಲೂಕು ಕುರೇಕುಪ್ಪ ಗ್ರಾಮದಲ್ಲಿ ಆಖಿಲ ಭಾರತ ಕಿಸಾನ್‌ಸಭಾ 90ನೇ ಸಂಸ್ಥಾಪನಾ ದಿನ ಆಚರಿಸಲಾಯಿತು.
ಸಂಡೂರು ತಾಲೂಕು ಕುರೇಕುಪ್ಪ ಗ್ರಾಮದಲ್ಲಿ ಆಖಿಲ ಭಾರತ ಕಿಸಾನ್‌ಸಭಾ 90ನೇ ಸಂಸ್ಥಾಪನಾ ದಿನ ಆಚರಿಸಲಾಯಿತು.
Published on
ಸಂಡೂರು: ಕುರೇಕುಪ್ಪ ಗ್ರಾಮದಲ್ಲಿ ಆಖಿಲ ಭಾರತ ಕಿಸಾನ್ ಸಭಾ 90ನೇ ಸಂಸ್ಥಾಪನಾ ದಿನಾಚರಣೆಗೆ ಗ್ರಾಮ ಘಟಕದ ಗೌರವ ಅಧ್ಯಕ್ಷ ಎನ್.ದೇವಣ್ಣ ಧ್ವಜಾರೋಹಣ ಮೂಲಕ ಇತ್ತೀಚಿಗೆ ಚಾಲನೆ ನೀಡಿದರು.
ಕರ್ನಾಟಕ ಪ್ರಾಂತ ರೈತಸಂಘದ ತಾಲೂಕು ಅಧ್ಯಕ್ಷ ಜಿ.ಪಂಪನಗೌಡ ಮಾತನಾಡಿ, ಆಖಿಲ ಭಾರತ ಕಿಸಾನ್ ಸಭಾ ರೈತರು, ಕಾರ್ಮಿಕರು, ಅಂಗನವಾಡಿ ನೌಕರರು ಸೇರಿದಂತೆ ಇತರರ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸುತ್ತಾ ಬಂದಿದೆ. ರೈತರಿಗೆ ಬೆಂಬಲ ಬೆಲೆ ನೀಡಬೇಕು. ಜಿಂದಾಲ್ ಕಂಪನಿಯಿಂದ ಬಲವಂತದ ಭೂ ಸ್ವಾಧೀನವನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ಕುಡತಿನಿಯ ಭೂಸಂತ್ರಸ್ತರಿಗೆ ನ್ಯಾಯಯುತ ಭೂ ಬೆಲೆಯನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಇಲ್ಲದಿದ್ದರೆ ರೈತರಿಗೆ ಭೂಮಿಯನ್ನು ವಾಪಸ್ ಕೊಡಬೇಕೆಂದು ಆಗ್ರಹಿಸಿದರು. ಸಿಪಿಐ (ಎಂ) ತಾಲೂಕು ಕಾರ್ಯದರ್ಶಿ ಎ.ಸ್ವಾಮಿ, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ವಿ.ದೇವಣ್ಣ, ರೈತರಾದ ಶಿವರುದ್ರ ಗೌಡ, ಪಂಪನಗೌಡ, ಮಹಾಂತೇಶ್, ಸಿದ್ದೇಶ್, ವೀರಭದ್ರ ಸ್ವಾಮಿ, ಬಸವರಾಜ, ಅಂಜಿನಪ್ಪ, ತಿಪ್ಪೇಸ್ವಾಮಿ. ಸಿದ್ದಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net