ಮಾದಕ ವಸ್ತುಗಳಿಂದ ದೂರವಿರಿ

ಸಿರಿಗೇರಿ ಜನತಾ ಕಾಲನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾದಕ ವಸ್ತು ಸೇವನೆ ತಡೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯಶಿಕ್ಷಕ ಬಿ.ಆರ್.ಶಿವಕುಮಾರ್, ಎಸ್ಡಿಎಂಸಿ ಅಧ್ಯಕ್ಷ ಎಚ್.ರಾಮಲಿಂಗಪ್ಪ, ಶಿಕ್ಷಕರಾದ ಯೋಗೀಶ್ ಜಾಲಿ, ಉಮೇಶ್, ಎಂ.ಹನುಮಯ್ಯ, ಎಚ್.ಈರಣ್ಣ, ಎಚ್.ಶಿರಿಷಾ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಜಾಗೃತಿ ಕಾರ್ಯಕ್ರಮ
  • ಮುಖ್ಯಶಿಕ್ಷಕ ಬಿ.ಆರ್.ಶಿವಕುಮಾರ್ ಹೇಳಿಕೆ
ಸಿರಿಗೇರಿ: ಮಾದಕ ವಸ್ತುಗಳ ಸೇವನೆ ಇಂದಿನ ಸಮಾಜದ ಗಂಭೀರ ಸಮಸ್ಯೆಯಾಗಿದೆ ಎಂದು ಮುಖ್ಯಶಿಕ್ಷಕ ಬಿ.ಆರ್.ಶಿವಕುಮಾರ್ ಹೇಳಿದರು.
ಜನತಾ ಕಾಲನಿ ಸಹಿಪ್ರಾ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ಸೇವನೆ ತಡೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾದಕ ವಸ್ತುಗಳ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ, ಕುಟುಂಬ ಮತ್ತು ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.
ಯುವಕರ ಭವಿಷ್ಯ ಮತ್ತು ಕುಟುಂಬದ ನೆಮ್ಮದಿ ಹಾಳಾಗಿ ಹಿಂಸೆ ಮತ್ತು ಆರ್ಥಿಕ ಸಮಸ್ಯೆ ಹೆಚ್ಚಾಗುತ್ತವೆ. ಆದ್ದರಿಂದ ಮಾದಕ ವಸ್ತುಗಳ ಸೇವನೆಯಿಂದ ದೂರವಿರಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net