ಕಳೆದ ಐದು ವರ್ಷಗಳಿಂದ ಕೊಂಚಿಗೇರಿ ಶಾಲೆಯಲ್ಲಿ ಮುಖ್ಯಗುರುವಾಗಿ ಸೇವೆ ಸಲ್ಲಿಸಿ ಶಾಲೆ ಮತ್ತು ಶಿಕ್ಷಣದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪ್ರಸ್ತುತ ಹದಿನೇಳು ವರ್ಷಗಳ ಸುದೀರ್ಘ ಬೋಧನಾ ಅನುಭವ ಹೊಂದಿದ್ದು, ಈ ಮುನ್ನ ತಾಲೂಕಿನ ಸಿರಿಗೇರಿ ಗ್ರಾಮದಲ್ಲಿ ಎಂಟು ವರ್ಷಗಳ ಕಾಲ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ (ಸಿಆರ್‌ಪಿ) ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು.