ಈಗಾಗಲೇ ಸಂಘಟನೆಯು ರಾಜ್ಯದಲ್ಲಿ ನ.26 ರಿಂದ 2026ರ ಮಾ.25ರವರೆಗೆ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ದ ರಾಜ್ಯವ್ಯಾಪಿ ಆಂದೋಲನ ಭಾಗವಾಗಿ ಸಹಿ ಸಂಗ್ರಹಣಾ ಅಭಿಯಾನ, ಪ್ರತಿಭಟನೆಗಳು, ಸಭೆ- ಸಮಾವೇಶಗಳು, ಮೆರವಣಿಗೆ, ಗುಂಪು ಚರ್ಚೆಗಳು, ಸಿನಿಮಾ ಪ್ರದರ್ಶನ, ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಹಿಳೆಯರನ್ನು ಜಾಗೃತಗೊಳಿಸಿದೆ ಎಂದರು. ಪದಾಧಿಕಾರಿಗಳಾದ ಕೆ.ಎಂ.ಈಶ್ವರಿ, ಪದ್ಮ, ಗಿರಿಜಾ, ಸೌಮ್ಯ, ಅಭಿಲಾಷ, ಪಾರ್ವತಮ್ಮ, ಸುಜಾತ, ವಿದ್ಯಾ ಇದ್ದರು.