ಹೆಚ್ಚುವರಿ ರೈಲು ಸಂಚಾರ ಆರಂಭಿಸಿ

ಸಂಡೂರು ತಾಲೂಕು ತೋರಣಗಲ್‌ನಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣಗೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಸಂಡೂರು ತಾಲೂಕು ತೋರಣಗಲ್‌ನಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣಗೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
Published on
ಸಂಡೂರು: ತೋರಣಗಲ್ ಮೂಲಕ ಹುಬ್ಬಳ್ಳಿಗೆ ಬೆಳಗ್ಗೆ 8 ಗಂಟೆ ಬಳಿಕ ಹೆಚ್ಚಿನ ರೈಲುಗಳು ಸಂಚರಿಸಬೇಕು ಮತ್ತು ತೋರಣಗಲ್‌ನಲ್ಲಿ ಎಲ್ಲ ರೈಲುಗಳ ನಿಲುಗಡೆಗೆ ಒತ್ತಾಯಿಸಿ ತೋರಣಗಲ್‌ನಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣಗೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು.
ತೋರಣಗಲ್ ರೈಲು ನಿಲ್ದಾಣ ವ್ಯಾಪ್ತಿಯ ಹಳ್ಳಿಗಳು ಕೈಗಾರಿಕಾ ಪ್ರದೇಶದಿಂದ ಕೂಡಿದ್ದು, ಗುಂತಕಲ್‌ನಿಂದ ಹುಬ್ಬಳ್ಳಿಗೆ ಬೆಳಗ್ಗೆ 8 ಗಂಟೆಗೆ ಒಂದು ರೈಲು ಸಂಚರಿಸುತ್ತದೆ. ಇದರಿಂದಾಗಿ ನಾನಾ ಸ್ತರದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಬೆಳಗ್ಗೆ 9 ಗಂಟೆಗೆ ತೋರಣಗಲ್ಲು ಮೂಲಕ ಹುಬ್ಬಳ್ಳಿಗೆ ರೈಲು ಸಂಚಾರ ಆರಂಭಿಸಬೇಕು ಎಂದು ಆಗ್ರಹಿಸಿದರು.
ಹುಬ್ಬಳ್ಳಿಯಿಂದ ಬೆಳಗ್ಗೆ 6ಗಂಟೆಗೆ ಹೊರಟು 9.30ರಿಂದ 10ಗಂಟೆಗೆ ತೋರಣಗಲ್‌ಗೆ ತಲುಪುವಂತೆ ರೈಲು ಸಂಚಾರ ಆರಂಭಿಸಿದರೆ ಪ್ರಯಾಣಿಕರಿಗೆ ಅನುಕೂಲಕವಾಗಲಿದೆ. ಮನಗುರ್-ಕೊಲ್ಲಾಪುರ, ಯಶವಂತಪುರನಿಂದ ಸಂಚರಿಸುತ್ತಿದ್ದ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ, ಹುಬ್ಬಳ್ಳಿಯಿಂದ ಚೆನ್ನೈಗೆ ಹೊರಡುತ್ತಿದ್ದ ರೈಲಿಗೆ ಮತ್ತೆ ಚಾಲನೆ ನೀಡಬೇಕೆಂದು ಒತ್ತಾಯಿಸಿದರು.
ದಲಿತ ಯುವಕ ಸಂಘದ ಅಧ್ಯಕ ನಾಗಭೂಷಣ, ಕಾರ್ಯದರ್ಶಿ ಪಾಲ್ ಪಕ್ಕೀರ್, ಕರ್ನಾಟಕ ಪ್ರಾಂತ ರೈತಸಂಘದ ತಾಲೂಕು ಅಧ್ಯಕ್ಷ ಪಂಪನಗೌಡ, ಪ್ರಮುಖರಾದ ಕೆ.ದೇವಣ್ಣ, ಸಿ.ಡಿ.ಹಾಲಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net