ಮೆಕ್ಕೆಜೋಳ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

ಬಳ್ಳಾರಿಯ ಡಿಸಿ ಕಚೇರಿ ಆವರಣದಲ್ಲಿ ಎಐಕೆಕೆಎಂಎಸ್ ರೈತ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಸಂಘಟನೆ ರಾಜ್ಯ ಸಮಿತಿ ಸದಸ್ಯ ಈ.ಹನುಮಂತಪ್ಪ, ಜಿಲ್ಲಾಧ್ಯಕ್ಷ ಗೋವಿಂದ್, ಪದಾಧಿಕಾರಿಗಳಾದ ಕಲ್ಲುಕಂಭ ಪಂಪಾಪತಿ, ಗುರಳ್ಳಿ ರಾಜ, ಎಚ್.ಎನ್.ಬಸವರಾಜ, ಮಾಬುಸಾಬ್,ಡಿ.ಕಾಳಿಂಗಪ್ಪ, ಮಾಹಾಲಿಂಗಪ್ಪ, ನಟರಾಜ, ದಾನಪ್ಪ ಇದ್ದರು.
ಬಳ್ಳಾರಿಯ ಡಿಸಿ ಕಚೇರಿ ಆವರಣದಲ್ಲಿ ಎಐಕೆಕೆಎಂಎಸ್ ರೈತ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಸಂಘಟನೆ ರಾಜ್ಯ ಸಮಿತಿ ಸದಸ್ಯ ಈ.ಹನುಮಂತಪ್ಪ, ಜಿಲ್ಲಾಧ್ಯಕ್ಷ ಗೋವಿಂದ್, ಪದಾಧಿಕಾರಿಗಳಾದ ಕಲ್ಲುಕಂಭ ಪಂಪಾಪತಿ, ಗುರಳ್ಳಿ ರಾಜ, ಎಚ್.ಎನ್.ಬಸವರಾಜ, ಮಾಬುಸಾಬ್,ಡಿ.ಕಾಳಿಂಗಪ್ಪ, ಮಾಹಾಲಿಂಗಪ್ಪ, ನಟರಾಜ, ದಾನಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಂಬಲ ಬೆಲೆ ನೀಡುವಂತೆ
  • ರಾಜ್ಯ ಸರ್ಕಾರ
  • ಖರೀದಿ ಕೇಂದ್ರ

 ಬಳ್ಳಾರಿ : ಮೆಕ್ಕೆಜೋಳ ಬೆಳೆಗೆ ಮೂರು ಸಾವಿರ ರೂ. ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ, ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ  ಎಐಕೆಕೆಎಂಎಸ್ ರೈತ ಸಂಘಟನೆ ವತಿಯಿಂದ  ಪ್ರತಿಭಟನೆ ನಡೆಯಿತು.

ಎಐಕೆಕೆಎಂಎಸ್ ಸಂಘಟನೆ ಒತ್ತಾಯ :  ಸಂಘಟನೆ ರಾಜ್ಯ ಸಮಿತಿ ಸದಸ್ಯ ಈ.ಹನುಮಂತಪ್ಪ ಮಾತನಾಡಿ, ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಈ ಬಾರಿ ಬಹುತೇಕ ರೈತರು ಮೆಕ್ಕೆಜೋಳ ಬೆಳೆ ಬೆಳೆದಿದ್ದಾರೆ. ಈ ಭಾಗದಲ್ಲಿ ಇತ್ತೀಚಿಗೆ ಕೆಲವು ವರ್ಷಗಳಿಂದ ಮೆಣಸಿನಕಾಯಿ ಬೆಳೆಯುವ ರೈತರಿಗೆ ಸರಿಯಾದ ಬೆಲೆ ಸಿಗದೆ ಇರುವ ಕಾರಣ ಸಾಕಷ್ಟು ನಷ್ಟಕ್ಕೀಡಾದರು. ಆದ್ದರಿಂದ, ಮೆಕ್ಕೆಜೋಳ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಮುಂಗಾರಿನ ಪ್ರಾರಂಭದ ಹಂತದಲ್ಲಿ ಮೆಕ್ಕೆಜೋಳಕ್ಕೆ ಉತ್ತಮವಾಗಿದ್ದ ಬೆಲೆ ಈಗ ಬಹಳಷ್ಟು ಕುಸಿದಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ನೀಡುವ ಬೆಂಬಲ ಬೆಲೆಯು ರೈತರನ್ನು ಸ್ವಲ್ಪ ಸಂಕಷ್ಟಗಳಿಂದ ಪಾರು ಮಾಡುವಂತಿತ್ತು. ಆದರೆ, ಸರ್ಕಾರದ ವತಿಯಿಂದ ನಡೆಯುವ ಬೆಳೆ ಖರೀದಿಯು ಸಹ ಸರಿಯಾದ ಸಮಯಕ್ಕೆ ನಡೆಯದಿರುವುದರಿಂದ, ಖಾಸಗಿ ವ್ಯಾಪಾರಸ್ಥರಿಗೆ ನೇರವಾಗಿ ಅನುಕೂಲವಾದಂತಿದೆ. ಹೀಗಾಗಿ ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸುವುಸುದು ಜರೂರಿನ ಕೆಲಸವಾಗಿದೆ ಎಂದರು.

ಸಂಘದ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡಿ, ಮೆಕ್ಕೆಜೋಳ ಬೆಳೆ ಬೆಳೆಯಲು ಎಕರೆಗೆ 40 ರಿಂದ 60 ಸಾವಿರ ರೂ. ವೆಚ್ಚವಾಗುತ್ತಿದೆ. ಆದ್ದರಿಂದ, ಮೆಕ್ಕೆಜೋಳ ಬೆಳೆಗೆ ಸಿ2 ಪ್ಲಸ್ ಶೇ. 50ರಷ್ಟು ಆಧಾರದಲ್ಲಿ ಕ್ವಿಂಟಾಲ್‌ಗೆ ಮೂರು ಸಾವಿರ ರೂ. ಬೆಂಬಲ ಬೆಲೆ ನೀಡಿ, ಸರ್ಕಾರವೇ ಖರೀದಿಸಬೇಕು ಎಂದು ಆಗ್ರಹಿಸಿದರು. ಬಳಿಕ ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net