ಅರಣ್ಯ ತನಿಖಾ ಠಾಣೆ ಆರಂಭಿಸಿ

ಅರಣ್ಯ ಇಲಾಖೆ ತನಿಖಾ ಠಾಣೆ ಆರಂಭಿಸುವಂತೆ ಆಗ್ರಹಿಸಿ ಸಂಡೂರಿನಲ್ಲಿ ಶಾಸಕಿ ಅನ್ನಪೂರ್ಣ ತುಕಾರಾಮ್‌ಗೆ ಜನಸಂಗ್ರಾಮ ಪರಿಷತ್ತಿನಿಂದ ಮನವಿ ಸಲ್ಲಿಸಲಾಯಿತು. ಉಪಾಧ್ಯಕ್ಷ ಟಿ.ಎಂ.ಶಿವಕುಮಾರ್, ಪ್ರಮುಖರಾದ ಎ.ಜಿ. ಶ್ರೀಶೈಲ, ಮೂಲೆಮನೆ ಈರಣ್ಣ ಇದ್ದರು.
ಅರಣ್ಯ ಇಲಾಖೆ ತನಿಖಾ ಠಾಣೆ ಆರಂಭಿಸುವಂತೆ ಆಗ್ರಹಿಸಿ ಸಂಡೂರಿನಲ್ಲಿ ಶಾಸಕಿ ಅನ್ನಪೂರ್ಣ ತುಕಾರಾಮ್‌ಗೆ ಜನಸಂಗ್ರಾಮ ಪರಿಷತ್ತಿನಿಂದ ಮನವಿ ಸಲ್ಲಿಸಲಾಯಿತು. ಉಪಾಧ್ಯಕ್ಷ ಟಿ.ಎಂ.ಶಿವಕುಮಾರ್, ಪ್ರಮುಖರಾದ ಎ.ಜಿ. ಶ್ರೀಶೈಲ, ಮೂಲೆಮನೆ ಈರಣ್ಣ ಇದ್ದರು.
Published on
ಸಂಡೂರು: ತಾಲೂಕಿನಲ್ಲಿ ಅರಣ್ಯ ತನಿಖಾ ಠಾಣೆಗಳನ್ನು ಸ್ಥಾಪಿಸುವಂತೆ ಆಗ್ರಹಿಸಿ ಶಾಸಕಿ ಅನ್ನಪೂರ್ಣ ತುಕಾರಾಮ್ ಅವರಿಗೆ ಜನ ಸಂಗ್ರಾಮ ಪರಿಷತ್ತಿನಿಂದ ಸೋಮವಾರ ಮನವಿ ಸಲ್ಲಿಸಲಾಯಿತು.
ಪರಿಷತ್ತಿನ ಉಪಾಧ್ಯಕ್ಷ ಟಿ.ಎಂ.ಶಿವಕುಮಾರ್ ಮಾತನಾಡಿ, ಸಂಡೂರು ಭಾಗದಲ್ಲಿ ವಾರ್ಷಿಕ 40ರಿಂದ 43 ಮೆಟ್ರಿಕ್ ಟನ್ ಕಬ್ಬಿಣ ಹಾಗೂ ಮ್ಯಾಂಗನೀಸ್ ಅದಿರು ಉತ್ಪಾದನೆಯಾಗುತ್ತಿದ್ದು, ಜಿಲ್ಲೆಯ ವಿವಿಧೆಡೆ ಹಾಗೂ ಹೊರರಾಜ್ಯಗಳಿಗೆ ಸಾಗಣೆಯಾಗುತ್ತಿದೆ.
ಕೇಂದ್ರ ಸರ್ಕಾರದ ಒಡೆತನದ ಎನ್‌ಎಂಡಿಸಿ ಕಂಪನಿ ಗಣಿ ಪ್ರದೇಶದಲ್ಲಿ ಅದಿರು ಕಳ್ಳತನ ಆಗಿರುವ ಹಿನ್ನೆಲೆಯಲ್ಲಿ ಅರಣ್ಯ, ಪೊಲೀಸ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಎನ್‌ಎಂಡಿಸಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು. ಬನ್ನಿಹಟ್ಟಿ ಮತ್ತು ರಾಜಾಪುರದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಬಂಡ್ರಿ, ಮೆಟ್ರಿಕಿ-ಗಂಗಲಾಪುರ ಚೆಕ್‌ಪೋಸ್ಟ್ ಗಳು ಸುಸ್ಥಿಯಲ್ಲಿಲ್ಲದ ಹಿನ್ನೆಲೆಯಲ್ಲಿ ಅದಿರು ಅಕ್ರಮ ಸಾಗಣೆಗೆ ಅನುಕೂಲವಾಗಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಉತ್ಪನ್ನಗಳ ಮೇಲೆ ಕಣ್ಗಾವಲಿಡಲು ಅಲ್ಲಿನ ಅರಣ್ಯ ಇಲಾಖೆ ಚೆಕ್‌ಪೋಸ್ಟ್‌ಗಳನ್ನು ತೆರೆದಿರುವುದರಿಂದ ಕಳ್ಳ ಸಾಗಣೆಗೆ ತಡೆಬಿದ್ದಿದೆ. ಬಂಡ್ರಿ, ಮೆಟ್ರಿಕಿ-ಗಂಗಲಾಪುರ ಚೆಕ್‌ಪೋಸ್ಟ್‌ಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net