ಶ್ರೀರಾಘವೇಂದ್ರ ಸ್ವಾಮಿಗಳ 355ನೇ ಆರಾಧನೆ

ಶ್ರೀರಾಘವೇಂದ್ರ ಸ್ವಾಮಿಗಳ 355ನೇ ಆರಾಧನೆ
ಶ್ರೀರಾಘವೇಂದ್ರ ಸ್ವಾಮಿಗಳ 355ನೇ ಆರಾಧನೆ
Published on

ಪ್ರಮುಖ ಮುಖ್ಯಾಂಶಗಳು

  • ಆ.29ರಿಂದ 31ರವರಗೆ

ಬಳ್ಳಾರಿ :

ನಗರದ ರಾಯಲ್ ಕಾಲನಲ್ಲಿಯಲ್ಲಿರುವ ಶ್ರೀಸಂಜೀವರಾಯರು ಹಾಗೂ ಶ್ರೀರಾಘವೇಂದ್ರ ಸ್ವಾಮಿಗಳ ಅವರ ಮಠ ಸೇವಾ ಟ್ರಸ್ಟ್ ಸನ್ನಿಧಾನದಲ್ಲಿ ಶ್ರೀರಾಘವೇಂದ್ರ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವವನ್ನು ಆ.29 ರಿಂದ 31ರವರೆಗೆ ಹಮ್ಮಿಕೊಳ್ಳಲಾಗಿದೆ.

ಆ.27ರಂದು ಸಾಯಂಕಾಲ ಆರು ಗಂಟೆಗೆ ಶ್ರೀ ಲಕ್ಷ್ಮೀ, ಗೋ, ಧಾನ್ಯಪೂಜೆ ಹಾಗೂ ಧ್ವಜಾರೋಹಣ ನೆರವೇರಲಿದೆ. ಆ.29ರಂದು ಶ್ರೀರಾಯರ ಪೂರ್ವರಾಧನೆ, ಆ.30ರಂದು ಮಧ್ಯಾರಾಧನೆ ಹಾಗೂ ಆ.31ರಂದು ಉತ್ತರಾರಾಧನೆ ನಡೆಯಲಿದೆ. ಆ.31ರ ಸೋಮವಾರ ಸಾಯಂಕಾಲ 6.00 ಗಂಟೆಗೆ ತುಂಗಾಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ತಂಡದಿಂದ ವಿಶೇಷ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಜರುಗಲಿದೆ. ಆರಾಧನೆ ಅಂಗವಾಗಿ ಅನ್ನಸಂತರ್ಪಣೆ, ಕನಕಾಭಿಷೇಕ, ರಥೋತ್ಸವ, ಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿಧ ಸೇವೆಗಳಿಗೆ ಹಾಗೂ ಕಾಣಿಕೆ ನೀಡಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಗುರುರಾಜರ, ಶ್ರೀವಾಯುದೇವರ ಹಾಗೂ ಶ್ರೀ ಶ್ರೀನಿವಾಸ ದೇವರ ಸೇವೆ ಮಾಡಿ ಕೃಪೆಗೆ ಪಾತ್ರರಾಗಬೇಕಾಗಿ ಎಂದು ಟ್ರಸ್ಟ್ ಅಧ್ಯಕ್ಷ ವಿ. ರಾಘವೇಂದ್ರ ಹಾಗೂ ಟ್ರಸ್ಟ್ ಮಂಡಳಿ ಪ್ರಕಟಣೆಯಲ್ಲಿ ಕೋರಿದ್ದಾರೆ.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net