ಹೂವಿನಹಡಗಲಿಯಲ್ಲಿ ಕ್ರೀಡಾಕೂಟ ಆಯೋಜನೆ

ಹೂವಿನಹಡಗಲಿಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಈಶ್ವರ ಮೂರ್ತಿಗಳ ಮೆರವಣಿಗೆ ನಡೆಯಿತು.
ಹೂವಿನಹಡಗಲಿಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಈಶ್ವರ ಮೂರ್ತಿಗಳ ಮೆರವಣಿಗೆ ನಡೆಯಿತು.
Published on
ಹೂವಿನಹಡಗಲಿ: ತಾಲೂಕಿನ ವಿವಿಧ ದೇವಾಲಯಗಳಲ್ಲಿ ಶಿವರಾತ್ರಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಸುಕ್ಷೇತ್ರ ಕುರುವತ್ತಿಯ ಮಲ್ಲಿಕಾರ್ಜುನ ಹಾಗೂ ಬಸವೇಶ್ವರಸ್ವಾಮಿ ಮೂರ್ತಿಗಳನ್ನು ಬೆಳ್ಳಿ ಆಭರಣಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪಟ್ಟಣದ ಕೋಟೆ ಭಾಗದ ಕಲ್ಲೇಶ್ವರ ಹಾಗೂ ಪಾಲಾಳೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಮಹಿಳೆಯರು ಸಾಲು ನಿಂತು ದರ್ಶನ ಪಡೆದು ಹಣ್ಣು-ಹಂಪಲು ಸಮರ್ಪಿಸಿದರು.
ಸೋಗಿ ಬೆಟ್ಟದ ಮಲ್ಲೇಶ್ವರ, ಪಟ್ಟಣದ ಮೂರುದೇವರ ದೇವಸ್ಥಾನದ ಕಾಶಿ ವಿಶ್ವೇಶ್ವರ ಸ್ವಾಮಿಗೆ ರುದ್ರಾಭಿಷೇಕ ಸಲ್ಲಿಸಲಾಯಿತು. ಉಪವಾಸ ಅಂಗವಾಗಿ ಸಾರ್ವಜನಿಕರು ಹಣ್ಣು-ಹಂಪಲು ಖರೀದಿಸಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಮಂಗಳವಾದ್ಯಗಳ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ 31 ಕ್ಕೂ ಹೆಚ್ಚು ಈಶ್ವರನ ಮೂರ್ತಿಗಳ ಮೆರವಣಿಗೆ ನಡೆಯಿತು.
ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ಮಹಿಳೆಯರು ಕೂಡ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net