ದೋಷ ನಿವಾರಣೆಗಾಗಿ ವಿಶೇಷ ಪೂಜೆ

ಸಿರಿಗೇರಿಯ ಶ್ರೀ ನಾಗನಾಥೇಶ್ವರ ದೇವಸ್ಥಾನ ಆವರಣದ ನಾಗ ಮೂರ್ತಿಗೆ ಸಾರ್ವಜನಿಕರು ಹಾಲೆರದು ನಾಗದೋಷ ನಿವಾರಣೆಗೆ ಬೇಡಿಕೊಂಡರು.
ಸಿರಿಗೇರಿಯ ಶ್ರೀ ನಾಗನಾಥೇಶ್ವರ ದೇವಸ್ಥಾನ ಆವರಣದ ನಾಗ ಮೂರ್ತಿಗೆ ಸಾರ್ವಜನಿಕರು ಹಾಲೆರದು ನಾಗದೋಷ ನಿವಾರಣೆಗೆ ಬೇಡಿಕೊಂಡರು.
Published on

ಸಿರಿಗೇರಿ: ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಗ ಚತುರ್ಥಿ ಮತ್ತು ನಾಗರ ಪಂಚಮಿ ಸಂಭ್ರಮದಿಂದ ಆಚರಿಸಲಾಯಿತು. ಈ ಹಬ್ಬದಲ್ಲಿ ನಾಗ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಹಾಲೆರೆದು ನಾಗದೋಷ ನಿವಾರಣೆಗೆ ಸಂಕಲ್ಪ ಮಾಡಿಕೊಳ್ಳುವುದು ವಿಶೇಷ.

ನಾಗದೋಷ ನಿವಾರಣೆಗಾಗಿ ಬೆಳ್ಳಿ ಕಣ್ಣು, ಮೀಸೆ ಅರ್ಪಿಸುವುದು ವಾಡಿಕೆ. ಇದಲ್ಲದೇ ಅಂಗನೂಲು, ಎಳ್ಳುಂಡೆ, ಕಡಲೆಹಿಟ್ಟಿನ ಉಂಡೆ, ಅಕ್ಕಿ ಉಂಡೆ, ಜೋಳದ ಹಳ್ಳು, ಸಜ್ಜೆ ಕಾಳು, ಕಡಲೆ ಕಾಳು ಇತರ ಖಾದ್ಯಗಳನ್ನು ದೇವರಿಗೆ ಸಮರ್ಪಿಸಿ ಹಾಲೆರೆದು ಸರ್ವ ದೋಷ ನಿವಾರಣೆಗೆ ಸಂಕಲ್ಪಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net