ಸೋಮಪ್ಪ ಕೆರೆಯ ಆರು ಎಕರೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣದೊಂದಿಗೆ ಡಿಪೋ ನಿರ್ಮಾಣಕ್ಕಾಗಿ ಸಾರಿಗೆ ಸಚಿವರಾಗಿದ್ದ ಸಗೀರ್ ಅಹ್ಮದ್ ಪಟ್ಟಣಕ್ಕೆ ಆಗಮಿಸಿ ಸ್ಥಳ ವೀಕ್ಷಿಸಿದ್ದರು. ರಾಜಕೀಯ ಕಾರಣಗಳಿಂದಾಗಿ ಆಗ ಬಸ್ ಡಿಪೋ ಕೈತಪ್ಪಿತ್ತು. ಕುರುಗೋಡು ಕಡೆಗೆ ಸಾಗುವ 40, ಸಿರಗುಪ್ಪ ಕಡೆಗೆ ಸಾಗುವ 13, ಗಂಗಾವತಿಗೆ 105, ಹೊಸಪೇಟೆಗೆ 76, ಬಳ್ಳಾರಿ ಕಡೆಗೆ ತೆರಳುವ 62 ಬಸ್‌ಗಳು, ಯಲಬುರ್ಗ ಕಡೆಗೆ 10, ಸುತ್ತಲ ಗ್ರಾಮೀಣ ಪ್ರದೇಶಗಳಿಗೆ 15 ಬಸ್‌ಗಳು ಸೇರಿದಂತೆ 350ಕ್ಕೂ ಹೆಚ್ಚಿನ ರೂಟ್ ಬಸ್‌ಗಳು ನಿತ್ಯ ಪಟ್ಟಣಕ್ಕೆ ಬಂದು ಹೋಗುತ್ತವೆ. ಇವುಗಳಲ್ಲಿ ವಾಯವ್ಯ ಕರ್ನಾಟಕದ 4, ಈಶಾನ್ಯ ಕರ್ನಾಟಕದ 276, ಕೆಎಸ್‌ಆರ್‌ಟಿಸಿಯ 24 ಬಸ್‌ಗಳಿವೆ. ಕಂಪ್ಲಿ ಬಸ್ ನಿಲ್ದಾಣದಲ್ಲಿ ನೈಟ್ ಹಾಲ್ಟ್ ಆಗಿ ಸಿರಗುಪ್ಪ, ಹೊಸಪೇಟೆ, ಕುರುಗೋಡು ಕಡೆಗೆ ತೆರಳುವ ಬಸ್‌ಗಳು ಕೂಡ ಇದೆ.