ಸಮಾಜಸೇವೆ ಗುಣ ಅಗತ್ಯ

ಹರಪನಹಳ್ಳಿ ತಾಲೂಕಿನ ತೆಲಿಗಿ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ದೇಣಿಗೆ ಸಮರ್ಪಿಸಿದರು. ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ  ದೊಡ್ಡಬಸಪ್ಪನವರ ಸಿದ್ದಪ್ಪ, ಸಾಹಿತಿ ಕೆ.ಎಸ್.ವೀರಭದ್ರಪ್ಪ, ಮರಿಗೌಡರ ಕೊಟ್ರೇಶಣ್ಣ, ಸಮಿತಿ ಸದಸ್ಯರಾದ ಅಜ್ಜಪ್ಪ, ಅಕ್ಕಸಾಲಿ ರವಿ, ಮುತ್ತಿಗಿ ಈರಪ್ಪ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ನಿಸ್ವಾರ್ಥ
  • ಸಮಾಜಸೇವೆ
  • ಮಾಡುವ
ಹರಪನಹಳ್ಳಿ: ದೇವಸ್ಥಾನಗಳ ನಿರ್ಮಾಣದಿಂದ ಗ್ರಾಮದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸುವುದರೊಂದಿಗೆ ಅಭಿವೃದ್ಧಿಯತ್ತ ಸಾಗಲು ಮುನ್ನುಡಿ ಬರೆದಂತಾಗುತ್ತದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ತಿಳಿಸಿದರು.
ತೆಲಿಗಿ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಿ ಮಾತನಾಡಿದರು. ಭಾರತ ದೇವಾಲಯಗಳ ನಾಡೆಂದು ಖ್ಯಾತಿ ಪಡೆದಿದೆ. ಜಗತ್ತಿನ ಹಲವಾರು ದೇಶಗಳು ನಮ್ಮ ಮೇಲೆ ಆಕ್ರಮಣ ಮಾಡಿದರೂ ಯಾವುದಕ್ಕೂ ನಲುಗದೆ ಸುವ್ಯವಸ್ಥಿತ ರೀತಿಯಲ್ಲಿ ದೇಶ ಸಾಗುತ್ತಿದೆ ಎಂದರು.
ಮನುಷ್ಯ ಸ್ವಾರ್ಥಿಯಾಗದೆ ದೇವರು ಕರುಣಿಸಿದಷ್ಟು ನಿಸ್ವಾರ್ಥವಾಗಿ ಸಮಾಜಸೇವೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಕೆಲವರು ಪ್ರಚಾರಕ್ಕಾಗಿ ಸಹಾಯದ ಸೋಗು ಮಾಡುವವರಿದ್ದಾರೆ. ದೇವರು ಎಲ್ಲವನ್ನು ಗಮನಿಸಿ ಅವರ ಯೋಗ್ಯತೆಗೆ ಅನುಗುಣವಾಗಿ ಬದುಕು ನೀಡುತ್ತಾನೆ ಎಂದು ತಿಳಿಸಿದರು.
ಪ್ರಮುಖರಾದ ಅಕ್ಕಸಾಲಿ ಮಂಜಪ್ಪ, ನೀಲಗುಂದ ರುದ್ರಪ್ಪ, ಅಕ್ಕಸಾಲಿ ಅಜ್ಜಪ್ಪ, ಪೂಜಾರ ಪ್ರವೀಣ, ಮುತ್ತಿಗಿ ವೀರಭದ್ರಪ್ಪ, ಹಾಲಮ್ಮ ಪಿ., ಶಂಕ್ರಮ್ಮ, ಚನ್ನಮ್ಮ, ರುದ್ರಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net