ಕೆ.ಕೆ. ತಾಂಡಾ ಕೆರೆಗೆ ಹರಿದು ಬಂದ ಗಂಗೆ

ಸಿಂಗಟಾಲೂರು ಏತನೀರಾವರಿ ಯೋಜನೆಯಡಿ ಹೂವಿನಹಡಗಲಿ ತಾಲೂಕಿನ ಮಾನ್ಯರಮಸಲವಾಡ ಕೆರೆಯ ಮೂಲಕ ಕೆ.ಕೆ. ತಾಂಡಾದ ಕೆರೆಗೆ ಸೋಮವಾರ ನೀರು ಹರಿಸಿರುವುದು.
ಸಿಂಗಟಾಲೂರು ಏತನೀರಾವರಿ ಯೋಜನೆಯಡಿ ಹೂವಿನಹಡಗಲಿ ತಾಲೂಕಿನ ಮಾನ್ಯರಮಸಲವಾಡ ಕೆರೆಯ ಮೂಲಕ ಕೆ.ಕೆ. ತಾಂಡಾದ ಕೆರೆಗೆ ಸೋಮವಾರ ನೀರು ಹರಿಸಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ರೈತರಿಂದ ಸಂಭ್ರಮಾಚರಣೆ

ಹೂವಿನಹಡಗಲಿ: ಸಿಂಗಟಾಲೂರು ಏತನೀರಾವರಿ ಯೋಜನೆಯ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ತಾಲೂಕಿನ ಮಾನ್ಯರ ಮಸಲವಾಡ ಕೆರೆಯ ಮೂಲಕ ಕೆ.ಕೆ. ತಾಂಡಾ ಕೆರೆಗೆ ಸೋಮವಾರ ನೀರು ಹರಿಸಲಾಗಿದ್ದು ರೈತರು ಸಭ್ರಮ ಆಚರಿಸಿದರು.

ಕಳೆದ ವಾರ ಸಿಂಗಟಾಲೂರು ಏತ ನೀರಾವರಿ ಯೋಜನೆ ಕಚೇರಿ ಮುಂದೆ ರಾಜ್ಯ ರೈತ ಸಂಘ ಹಾಗೂ ತಾಂಡಾ ನಿವಾಸಿಗಳು ತಾಂಡಾದ ಜನ-ಜಾನುವಾರುಗಳಿಗೆ ಕುಡಿವ ನೀರು ಒದಗಿಸುವಂತೆ ಪ್ರತಿಭಟನೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಅಧಿಕಾರಿಗಳು, ಮಾನ್ಯರ ಮಸಲವಾಡ ಕೆರೆಗೆ ನೀರು ಹರಿಸಿ ಅಲ್ಲಿಂದ ಕೆ.ಕೆ ತಾಂಡಾದ ಕೆರೆಗೆ ನೀರು ಹರಿಸಿದ್ದಾರೆ. ಇದರಿಂದ ತಾಂಡಾ ಸುತ್ತಲಿನ ಜನ-ಜಾನುವರುಗಳಿಗೆ ನೀರಿನ ಅಭಾವ ನೀಗಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net