ಗಜಲ್ ಸಮ್ಮೇಳನಕ್ಕೆ ಸಿದ್ಧರಾಮ ಅಧ್ಯಕ್ಷ

 ಗಜಲ್ ಸಾಹಿತಿ ಸಿದ್ಧರಾಮ ಹಿರೇಮಠ
ಗಜಲ್ ಸಾಹಿತಿ ಸಿದ್ಧರಾಮ ಹಿರೇಮಠ
Published on

ಕೂಡ್ಲಿಗಿ: ಶಿವಮೊಗ್ಗದಲ್ಲಿ ನಡೆಯುವ ರಾಜ್ಯಮಟ್ಟದ 3ನೇ ಗಜಲ್ ಸಮ್ಮೇಳನದ ಅಧ್ಯಕ್ಷರಾಗಿ ಗಜಲ್ ಸಾಹಿತಿ ಸಿದ್ಧರಾಮ ಹಿರೇಮಠ ಆಯ್ಕೆಯಾಗಿದ್ದಾರೆ.

ಮೂಲತಹಃ ಕೊಪ್ಪಳ ಜಿಲ್ಲೆಯದವರಾದ ಸಿದ್ಧರಾಮ ಅವರು ಪಟ್ಟಣದ ಹಿರೇಮಠ ವಿದ್ಯಾಪೀಠ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ 35 ವರ್ಷ ಸೇವೆ ಸಲ್ಲಿಸಿ, ಪ್ರಾಚಾರ್ಯರಾಗಿ ನಿವೃತ್ತರಾಗಿದ್ದಾರೆ. 2022ರಲ್ಲಿ ದಸಾಪ ಬೆಳ್ಳಿ ಸಂಭ್ರಮ ಗಜಲ್ ಕಾವ್ಯ ಪ್ರಶಸ್ತಿ ಪಡೆದಿದ್ದಾರೆ.

ಬಾನುಸುರಿದ ಮಾತು, ನನ್ನೊಳಗಿನ ನಾನು, ಅನನ್ಯ (ಕವನ ಸಂಕಲನಗಳು), 35ಗಜಲ್ಗಳು, 45 ಹೈಕುಗಳು, ಲಹರಿ ಗಜಲ್ ಸಂಕಲನಗಳು, ಆಂಡಯ್ಯ, ವಡೇವು (ಪತ್ರಿಕಾ ಬರಹಗಳ ಸಂಗ್ರಹ). ಕನ್ನಡ ಗಜಲ್(ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ) ಸಂಕಲನ ರಚಿಸಿದ್ದಾರೆ. ಡೆಹ್ರಾಡೂನ್ ಕೆ4ಟಿ ಸಂಸ್ಥೆ 2016ರಲ್ಲಿ ನಡೆಸಿದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಅರೆಕಾಲಿಕ ವರದಿಗಾರರಾಗಿ ಕೆಲಸ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net