ಎನ್‌ಎಂಡಿಸಿ ಸಂಸ್ಥೆಗೆ ಷೋಕಾಸ್ ನೋಟಿಸ್

ಎನ್‌ಎಂಡಿಸಿ
ಎನ್‌ಎಂಡಿಸಿ
Published on

ಪ್ರಮುಖ ಮುಖ್ಯಾಂಶಗಳು

  • ಎಂಒಇಎಫ್‌ಸಿಸಿ ಯಿಂದ ಜಾರಿ
  • ದಶಕ ಕಳೆದರೂ ಸಂಸ್ಥೆ ಜಾರಿಗೊಳಿಸಿಲ್ಲ
ಬಳ್ಳಾರಿ : ಕೇಂದ್ರ ಸರ್ಕಾರ ಸ್ವಾಮ್ಯದ ಕೇಂದ್ರ ಉಕ್ಕು ಸಚಿವಾಲಯದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ(ಎನ್‌ಎಂಡಿಸಿ) ಸಂಸ್ಥೆಗೆ ಸೇರಿದ ‘ ಕುಮಾರಸ್ವಾಮಿ ಕಬ್ಬಿಣದ ಅದಿರು ಗಣಿ’ ಯಲ್ಲಿ 28 ಬಗೆಯ ಪರಿಸರ ನಿಯಮಗಳ ಗಂಭೀರ ಉಲ್ಲಂಘನೆ ಆರೋಪದಡಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ(ಎಂಒಇಎಫ್‌ಸಿಸಿ)ಯೂ ಸಂಸ್ಥೆಗೆ ಷೋಕಾಸ್ ನೋಟಿಸ್ ಜಾರಿ ಮಾಡಿದೆ.
ಗಣಿಯ ವಾರ್ಷಿಕ ಉತ್ಪಾದನೆಯನ್ನು 86 ಲಕ್ಷ ಟನ್‌ಗಳಿಂದ 1.62 ಕೋಟಿ ಟನ್‌ಗಳಿಗೆ ವಿಸ್ತರಿಸಲು ಎನ್‌ಎಂಡಿಸಿ ಪರಿಸರ ಹಿಂದೆ ಅನುಮೋದನೆ (ಇಸಿ) ಪಡೆದುಕೊಂಡಿತ್ತು. ಆದರೆ, ಈ ವಿಸ್ತರಣೆಯ ಬೆನ್ನಲ್ಲೇ ಪರಿಸರ ನಾಶವಾಗುತ್ತಿರುವ ಬಗ್ಗೆ 2025 ಅಕ್ಟೋಬರ್ 31ರಂದು ಸಚಿವಾಲಯ ಜನಸಂಗ್ರಾಮ ಪರಿಷತ ಸಂಘಟನೆಯಿಂದ ದೂರು ಸಲ್ಲಿಕೆಯಾಗಿತ್ತು. ಈ ದೂರಿನ ಆಧಾರದ ಮೇಲೆ ಎಂಒಇಎಫ್‌ಸಿಸಿಯ ಬೆಂಗಳೂರಿನ ಪ್ರಾದೇಶಿಕ ಕಚೇರಿಯ ಅಧಿಕಾರಿಗಳು ಜ.27ರಂದು ಭೇಟಿ ನೀಡಿ ಪರಿಶೀಲಿಸಿದ್ದರು.
2004ರ ಪರಿಸರ ಅನುಮತಿಯಲ್ಲೇ ಮೂರು ತಿಂಗಳೊಳಗೆ ವನ್ಯಜೀವಿ ಸಂರಕ್ಷಣಾ ಯೋಜನೆಗೆ ಅನುಮೋದನೆ ಪಡೆಯಬೇಕೆಂದು ಸೂಚಿಸಲಾಗಿದೆ. ಆದರೆ, ಎರಡು ದಶಕ ಕಳೆದರೂ ಸಂಸ್ಥೆ ಜಾರಿಗೊಳಿಸಿಲ್ಲ. ಗಣಿ ಪ್ರದೇಶದಲ್ಲಿ ಹಂತ ಹಂತವಾಗಿ ಕೈಗೊಳ್ಳಬೇಕಾದ ಹಸಿರು ವಲಯ ಅಭಿವೃದ್ಧಿ ಯೋಜನೆಯಲ್ಲಿ ಸಮರ್ಪಕವಾಗಿ ಜಾರಿ ಸೇರಿದಂತೆ ಒಟ್ಟು 28 ಬಗೆಯ ಪರಿಸರ ನಿಯಮಗಳ ಉಲ್ಲಂಘಿಸಿದೆ ಎಂಬುದಾಗಿ ನೋಟಿಸ್‌ನಲ್ಲಿ ತಿಳಿಸಲಾಗಿದೆ.
====
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net