ಹುಡುಗಿಯರ ವಿಷಯದಲ್ಲಿ ಆಘಾತಕಾರಿ ಸಮೀಕ್ಷೆ!

ಜಿಗೇನಹಳ್ಳಿಯಲ್ಲಿ ಹಮ್ಮಿಕೊಂಡ ಸಮಾಜ ಕಾರ್ಯ ಶಿಬಿರ ಸಮಾರೋಪದಲ್ಲಿ ಗ್ರಾಮದ ಸ್ಥಿತಿಗತಿ ವರದಿ ಮಂಡನೆ, ಹೊಸ ಪದವಿ ಕೋರ್ಸ್‌ಗಳ ಪ್ರವೇಶ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಡಾ.ಕೆ.ಜಿ.ಸುಮಾ, ಉಪನ್ಯಾಸಕ ಜಿ.ಹನುಮಂತಪ್ಪ, ಗ್ರಾಮದ ಮುಖಂಡರಾದ ಪ್ರವೀಣ್ ಕುಮಾರ್, ಮಂಜುನಾಥ ಪಾಟೀಲ್ ಇತರರಿದ್ದರು.

Published on
ಸಂಡೂರು: ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ತಾಲೂಕಿನ ಜಿಗೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಏಳು ದಿನಗಳ ಗ್ರಾಮೀಣ ಸಮಾಜ ಕಾರ್ಯ ಶಿಬಿರ ಸಮಾರೋಪ ಸಮಾರಂಭ ಶುಕ್ರವಾರ ನಡೆಯಿತು.
ಉಪನ್ಯಾಸಕ ಲಕ್ಷ್ಮಣ ತೋಳಿ ಗ್ರಾಮದಲ್ಲಿ ಕೌಟುಂಬಿಕ ತಳಹದಿ ಸಮೀಕ್ಷೆ ಕೈಗೊಂಡಿದ್ದು, ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಳ, ಶೇ.33ಅಕ್ಷರಸ್ಥರಾಗಿದ್ದರೆ, ಬಹುತೇಕರು ಪದವಿ, ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿಲ್ಲ. ಕೃಷಿ ಹಾಗೂ ಉಪಕಸುಬುಗಳೇ ಜೀವನಕ್ಕೆ ಆಧಾರ. ಹೈಸ್ಕೂಲ್ ಸೌಲಭ್ಯ ಇಲ್ಲದ ಕಾರಣ ಬಾಲಕಿಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸಾರಿಗೆ ಸಮಸ್ಯೆಯೂ ಗ್ರಾಮಸ್ಥರಿಗೆ ನಿತ್ಯ ತೊಂದರೆಯನ್ನುಂಟು ಮಾಡುತ್ತಿದೆ ಎಂಬುದನ್ನು ಸಮೀಕ್ಷೆಯಲ್ಲಿ ಪ್ರಸ್ತಾಪಿಸಿದ್ದಾರೆ. 
ಉಪನ್ಯಾಸಕ ಜಿ.ಹನುಮಂತಪ್ಪ, ಗ್ರಾಮದ ಮುಖಂಡ ಮಂಜುನಾಥ ಪಾಟೀಲ್ ಮಾತನಾಡಿದರು.
ಡಾ.ಕೆ.ಜಿ.ಸುಮಾ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಮಾಜಿ ಸದಸ್ಯ ಪ್ರವೀಣ ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಪ್ರಶಾಂತ್ ಕುಮಾರ್ ಇತರರಿದ್ದರು. ವಿದ್ಯಾರ್ಥಿಗಳಾದ ಹುಲುಗಪ್ಪ ಮತ್ತು ದೀಪಕ್ ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net