ಕಂಪ್ಲಿಯಲ್ಲಿ ಕಸಾಪ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಮುರಾರ್ಜಿ ದೇಸಾಯಿ ವಸತಿ ಶಾಲೆ ಶಿಕ್ಷಕ ಕೆ.ನಿಂಗಪ್ಪ ಮಾತನಾಡಿದರು. ಪ್ರಮುಖರಾದ ಷಣ್ಮುಖಪ್ಪ ಚಿತ್ರಗಾರ್, ಎಂ.ಎಸ್.ಗಂಗಾಧರ, ಬಸವರಾಜ, ಕಾಳಿಂಗವರ್ಧನ ಹಾದಿಮನಿ ಇತರರಿದ್ದರು.
ಕಂಪ್ಲಿ: ಸಮಾಜದಲ್ಲಿ ಸಮಾನತೆ ಸಾಧಿಸಲು ಶರಣರ ಆದರ್ಶ ಅನುಸರಣೆ ಅಗತ್ಯ ಎಂದು ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕ ಕೆ.ನಿಂಗಪ್ಪ ಹೇಳಿದರು.
ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಬುಧವಾರ ಹಮ್ಮಿಕೊಂಡಿದ್ದ ಮಹಾಂತಿನಮಠದ ಶ್ಯಾಮಲಮ್ಮ, ಗೌರಮ್ಮ ದತ್ತಿ, ದಿ.ಎಂ.ಪಿ.ಪ್ರಕಾಶ್ ಸ್ಮರಣಾರ್ಥ ದತ್ತಿ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಹಾಗೂ ಅಕ್ಕಮಹಾದೇವಿ ಜೀವನ ಚರಿತ್ರೆ ಕುರಿತು ಮಾತನಾಡಿದರು.
ಸಮಾಜದಲ್ಲಿ ಸಮಾನತೆ, ಏಕತೆ ಹಾಗೂ ಅಹಿಂಸೆ ನೆಲೆಸಲು ಶರಣ ಸಾಹಿತ್ಯ ಅಳವಡಿಸಿಕೊಳ್ಳುವುದು ಅಗತ್ಯ. ಅಕ್ಕಮಹಾದೇವಿಯ ತತ್ವಾದರ್ಶಗಳು ಸದಾ ಅನುಕರಣೀಯ ಎಂದರು. ನಂತರ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ರಾಜ್ಯ ನಿವೃತ್ತಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್.ಗಂಗಾಧರಯ್ಯ, ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಶಿಕ್ಷಕರಾದ ಬಸವರಾಜ, ಜಗದೀಶ, ನಿಲಯ ಪಾಲಕ ಮಲ್ಲಪ್ಪ, ಪ್ರಮುಖರಾದ ಸುಭಾಶ್ಚಂದ್ರಬೋಸ್, ಎಲಿಗಾರ ವೆಂಕಟರೆಡ್ಡಿ, ಕಾಳಿಂಗವರ್ಧನ ಹಾದಿಮನಿ, ಅಶೋಕ ಕುಕನೂರು, ಸಂತೋಷ್ ಸೋಗಿ ಇತರರಿದ್ದರು.