ಸಮಾಜಮುಖಿ ಕೆಲಸ ಮಾಡಿದ ಶರಣ

ಕೊಟ್ಟೂರಿನಲ್ಲಿ ಸಿದ್ದರಾಮೇಶ್ವರ ಜಯಂತಿ ನಿಮಿತ್ತ ಗುರುವಾರ ಶಿವಯೋಗಿ ಸಿದ್ದರಾಮೇಶ್ವರ ಹಾಗೂ ಸಮಾಜದ ಗುರು ಇಮ್ಮಡಿ ನಿರಂಜನ ಸಿದ್ದರಾಮೇಶ್ವರ ಭಾವಚಿತ್ರ ಮೆರವಣಿಗೆಗೆ ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಚಾಲನೆ ನೀಡಿದರು. ನಂದೀಪುರದ ಮಹೇಶ್ವರ ಸ್ವಾಮೀಜಿ, ತಹಸೀಲ್ದಾರ್ ಜಿ.ಕೆ.ಅಮರೇಶ, ಜಿಪಂ ಮಾಜಿ ಉಪಾಧ್ಯಕ್ಷ ಪಿ.ಎಚ್.ದೊಡ್ಡರಾಮಣ್ಣ, ಮಾಜಿ ಸದಸ್ಯ ಪಿ.ಎಚ್.ಪಂಪಣ್ಣ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ್ ಇತರರಿದ್ದರು.

Published on
ಕೊಟ್ಟೂರು: ವಚನಕಾರ, ತತ್ವಜ್ಞಾನಿ, ಸಮಾಜ ಸುಧಾರಕ, ಕರ್ಮಯೋ ಶಿವಯೋಗಿ ಸಿದ್ದರಾಮೇಶ್ವರ ಅವರು ಕೆರೆ, ಕಟ್ಟೆ, ದೇವಸ್ಥಾನಗಳನ್ನು ನಿರ್ಮಿಸಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ತಹಸೀಲ್ದಾರ್ ಜಿ.ಕೆ.ಅಮರೇಶ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಅನುಭವ ಮಂಟಪದ ಮೂರನೇ ಅಧ್ಯಕ್ಷರಾಗಿದ್ದ ಸಿದ್ದರಾಮೇಶ್ವರ ಅವರು ಸಾವಿರಾರು ವಚನಗಳ ಮೂಲಕ ಸಾಮಾಜಿಕ ಅಸಮಾನತೆ, ಮೂಢನಂಬಿಕೆ, ಅನಿಷ್ಟ ಪದ್ಧತಿಗಳನ್ನು ತೊಲಗಿಸಲು ಪ್ರಯತ್ನಿಸಿದ್ದರು. ಕರ್ತವ್ಯವೇ ದೇವರೆಂದು ನಂಬಿದ್ದ ಗಾರುಢಿಗ ಎಂದು ಬಣ್ಣಿಸಿದರು. ಜಿಪಂ ಮಾಜಿ ಉಪಾಧ್ಯಕ್ಷ ದೊಡ್ಡರಾಮಣ್ಣ, ಮಾಜಿ ಸದಸ್ಯ ಪಂಪಣ್ಣ, ಉದ್ಯಮಿ ಡಾ.ತಿಪ್ಪೇಸ್ವಾಮಿ ವೆಂಕಟೇಶ್, ಪ್ರಮುಖರಾದ ಪಿ.ಎಚ್.ಸಣ್ಣರಾಮಪ್ಪ, ಪಿಡಬ್ಲುೃಡಿ ಇಂಜಿನಿಯರ್ ಕೊಟ್ರೇಶ್ ಇತರರಿದ್ದರು.
ಮೆರವಣಿಗೆ: ಪಟ್ಟಣದಲ್ಲಿ ಭೋವಿ ಸಮಾಜದಿಂದ ಗುರುವಾರ ಸಿದ್ದರಾಮೇಶ್ವ ಜಯಂತಿ ಆಚರಿಸಲಾಯಿತು. ಸಿದ್ದರಾಮೇಶ್ವರ ಭಾವಚಿತ್ರದ ಮೆರವಣಿಗೆಗೆ ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಚಾಲನೆ ನೀಡಿದರು.
ಸಮಾಳ, ವೀರಗಾಸೆ ಸೇರಿದಂತೆ ವಿವಿಧ ಜನಪದ ವಾದ್ಯಮೇಳದೊಂದಿಗೆ ಸಿದ್ದರಾಮೇಶ್ವರ ಹಾಗೂ ಸಮಾಜದ ಗುರು ಇಮ್ಮಡಿ ನಿರಂಜನ ಸಿದ್ದರಾಮೇಶ್ವರ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ನಂದೀಪುರದ ಮಹೇಶ್ವರ ಸ್ವಾಮೀಜಿ, ಕಟ್ಟಿಮನಿ ಯೋಗಿರಾಜೇಂದ್ರ ಶಿವಾಚಾರ್ಯರು, ಜಿಪಂ ಉಪಾಧ್ಯಕ್ಷ ಪಿ.ಎಚ್.ದೊಡ್ಡರಾಮಣ್ಣ, ಸದಸ್ಯ ಪಿ.ಎಚ್.ಪಂಪಣ್ಣ, ಉದ್ಯಮಿಗಳಾದ ಡಾ.ತಿಪ್ಪೆಸ್ವಾಮಿ ವೆಂಕಟೇಶ್, ಪಿ.ಎಚ್.ಕೊಟ್ರೇಶ್, ಪಿ.ಕೆ.ಇಂದ್ರಕುಮಾರ್, ಪಿ.ಎಚ್.ಅಂಜೀನಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net