ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಶಶಿಕಾಂತ ಮಾತನಾಡಿ, ಕೆಂಪೇಗೌಡರು ಯಲಹಂಕ ನಾಡಪ್ರಭುಗಳಾಗಿದ್ದ ಜಯಗೌಡರ ವಂಶಸ್ಥರು. ಇವರ ತಂದೆ ಕೆಂಪನಂಜೇಗೌಡರು. ಕ್ರಿ.ಶ. 1510 ರಲ್ಲಿ ಜನಿಸಿದ ಕೆಂಪೇಗೌಡರು ಚಿಕ್ಕಂದಿನಿಂದಲೇ ಧೀರರೂ, ಕಲೆ ಮತ್ತು ಸಾಹಿತ್ಯ ಪ್ರೇಮಿಗಳೂ ಆಗಿದ್ದರು. ಕೆಂಪೇಗೌಡರು ನ್ಯಾಯಶಾಸ್ತ್ರ, ಇತಿಹಾಸ, ಭೂಗೋಳಶಾಸ್ತ್ರ, ತರ್ಕಶಾಸ್ತ್ರ, ತತ್ವಶಾಸ್ತ್ರಗಳ ಜೊತೆಗೆ ಖಡ್ಗ ವಿದ್ಯೆ, ಆಡಳಿತ, ಧರ್ಮನಿಷ್ಠೆ, ರಾಜ್ಯಭಾರ ಹಾಗೂ ಯುದ್ಧ ಕಲೆಗಳನ್ನು ಕರಗತ ಮಾಡಿಕೊಂಡಿದ್ದರು ಎಂದರು. ಕಾರ್ಯಕ್ರಮಕ್ಕೂ ಮುನ್ನ ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಲಾಯಿತು.