ಹೂವಿನಹಡಗಲಿ ತಾಲೂಕಿನ ಪುರ ಗ್ರಾಮದಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀ ಮಠದ ಸಿದ್ಧವೀರ ಶಿವಾಚಾರ್ಯರು ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್, ಶಿಕ್ಷಕ ಆರ್.ಬಿ. ನಾಗರಾಜ, ಪ್ರಮುಖರಾದ ಕಮಲಾ ರುದ್ರಪ್ಪ, ಕಾಗನೂರು ವೀರಣ್ಣ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶ್ರೀ ಸಿದ್ಧವೀರ ಶಿವಾಚಾರ್ಯ ಅನಿಸಿಕೆ
ದತ್ತಿ ಉಪನ್ಯಾಸ ಕಾರ್ಯಕ್ರಮ
ಹೂವಿನಹಡಗಲಿ: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಮಾಜದಲ್ಲಿ ಸಾಕಷ್ಟು ಅವಕಾಶಗಳಿದ್ದು ಅವುಗಳನ್ನು ಬಳಸಿಕೊಂಡು ಸಾಮಾಜಿಕ, ಆರ್ಥಿಕವಾಗಿ ಶಕ್ತರಾಗಬೇಕು ಎಂದು ಸೋಗಿ ಪುರವರ್ಗ ಕಟ್ಟಿಮನಿ ಮಠದ ಸಿದ್ಧವೀರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಪುರ ಗ್ರಾಮದ ಸೋಗಿ ಪುರವರ್ಗ ಕಟ್ಟಿಮನಿ ಮಠದಲ್ಲಿ ಶನಿವಾರ ಕಸಾಪ ತಾಲೂಕು ಘಟಕ ಆಯೋಜಿಸಿದ್ದ ಕೌಟುಂಬಿಕ ಸಂಬಂಧಗಳು ಹಾಗೂ ಕೃಷಿ ಪ್ರಗತಿಯಲ್ಲಿ ರೈತ ಮಹಿಳೆಯರ ಪಾತ್ರ ವಿಷಯ ಕುರಿತ ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವಿಶ್ವದಲ್ಲಿ ಕೃಷಿ ಪದ್ಧತಿ ಕಂಡು ಹಿಡಿದವರು ಮಹಿಳೆಯರಾಗಿದ್ದು ಈ ಬಗ್ಗೆ ಅವರಿಗೆ ಸಾಕಷ್ಟು ಜ್ಞಾನವಿದೆ. ಕೃಷಿಯ ಅವಿಭಾಜ್ಯ ಅಂಗವಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ದೊರಕುವ ಸ್ಥಾನಗಳು ಸಮರ್ಪಕವಾಗಿ ದೊರಕಿದರೆ ಅವರು ಉನ್ನತ ಸ್ಥಾನ-ಮಾನ ಪಡೆಯುತ್ತಾರೆ. ಗ್ರಾಮೀಣ ಭಾಗದ ಮಹಿಳೆಯರು ಹೈನುಗಾರಿಕೆ, ಕರಕುಶಲ ವಸ್ತುಗಳ ತಯಾರಿ, ಕಲಾಕೃತಿಗಳ ನಿರ್ಮಾಣ ಇತರ ಕಾಯಕದಲ್ಲಿ ಮುಂದಿದ್ದಾರೆ. ಕುಟುಂಬ ನಿರ್ವಹಣೆ ಜತೆಗೆ ಸಮಾಜದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಆರ್.ಬಿ. ನಾಗರಾಜ, ಪ್ರಮುಖರಾದ ಕಮಲಾ ರುದ್ರಪ್ಪ, ಕಾಗನೂರು ವೀರಣ್ಣ, ಎಂ.ಪಿ.ಎಂ. ಕೊಟ್ರಯ್ಯ, ಎ.ಎಂ. ಚನ್ನವೀರಸ್ವಾಮಿ, ಪ್ರಭು ಸೊಪ್ಪಿನ, ಮಹೇಶ್ವರ ಇತರರಿದ್ದರು.