ಸಂಡೂರು: ತಾಲೂಕು ವಕೀಲರ ಸಂಘಕ್ಕೆ ಮುಖ್ಯ ಕಾರ್ಯಕಾರಣಿ 5 ಸದಸ್ಯರನ್ನು ಕೋರ್ ಕಮಿಟಿಯಲ್ಲಿ ಶುಕ್ರವಾರ ಅವಿರೋಧ ಆಯ್ಕೆ ಮಾಡಲಾಯಿತು. ಅನುಭವವನ್ನು ಪರಿಗಣಿಸಿ ವಕೀಲರಾದ ಆರ್.ಬಸವರಾಜ, ಡಿ.ಸತ್ಯನಾರಾಯಣ, ಎಂ.ಚಂದ್ರ ನಾಯಕ, ಶ್ರುತಿ ತೋರಣಗಲ್, ಕೃಷ್ಣಾನಗರ ಬಿ.ರೆಹ್ಮತ್ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ ಕುಮಾರಸ್ವಾಮಿ ತೋರಣಗಲ್, ಉಪಾಧ್ಯಕ್ಷೆ ರೇಖಾ, ಕಾರ್ಯದರ್ಶಿ ರಾಮಮೂರ್ತಿ, ಖಜಾಂಚಿ ಹುಚ್ಚಪ್ಪ, ಮಾಜಿ ಅಧ್ಯಕ್ಷರಾದ ವಿಜಯಕು ಮಾರ್, ಟಿಎಂ.ಶಿವಕುಮಾರ್, ಗುಡುಕೋಟೆ ನಾಗರಾಜ್, ವೀರೇಶ್ ತೋರಣಗಲ್ ಇತರರಿದ್ದರು.