ಸತ್ಯದ ಪರಿಚಯವೇ ವಿಜ್ಞಾನ

ಬಳ್ಳಾರಿಯಲ್ಲಿ ವಿವೇಕಮಂಟಪ-ಉಪನ್ಯಾಸ ಮಾಲಿಕೆಯಲ್ಲಿ ವಿವೇಕ ಲೀಲಾಮೃತ ಕುರಿತು ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು. ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಆರ್.ಎಸ್.ತಿಮ್ಮನಗೌಡ, ವಿಶ್ವ ಬ್ರಾಹ್ಮಣ ವೈದಿಕ ಪ್ರತಿಷ್ಠಾನದ ಕಾರ್ಯದರ್ಶಿ ವೆಂಕಟೇಶ್ ಬಡಿಗೇರ ಇದ್ದರು.
ಬಳ್ಳಾರಿಯಲ್ಲಿ ವಿವೇಕಮಂಟಪ-ಉಪನ್ಯಾಸ ಮಾಲಿಕೆಯಲ್ಲಿ ವಿವೇಕ ಲೀಲಾಮೃತ ಕುರಿತು ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು. ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಆರ್.ಎಸ್.ತಿಮ್ಮನಗೌಡ, ವಿಶ್ವ ಬ್ರಾಹ್ಮಣ ವೈದಿಕ ಪ್ರತಿಷ್ಠಾನದ ಕಾರ್ಯದರ್ಶಿ ವೆಂಕಟೇಶ್ ಬಡಿಗೇರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಾಶ್ಚಾತ್ಯ
  • ಜೀವನ
  • ಶೈಲಿ
ಬಳ್ಳಾರಿ: ಅಧ್ಯಾತ್ಮ ಸತ್ಯದ ಬಗ್ಗೆ ಸಂಪೂರ್ಣ ಪರಿಚಯ ಮಾಡಿಕೊಡುವ ಸಾಧನವಾಗಿದೆ ಎಂದು ಗದಗ-ವಿಜಯಪುರ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ಡಾ.ರಾಜಕುಮಾರ್ ರಸ್ತೆಯಲ್ಲಿನ ಪಾಂಚಜನ್ಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿವೇಕಮಂಟಪ-ಉಪನ್ಯಾಸ ಮಾಲಿಕೆಯಲ್ಲಿ ವಿವೇಕ ಲೀಲಾಮೃತ ಕುರಿತು ಮಾತನಾಡಿದರು. ಅಧ್ಯಾತ್ಮ ಎಂದರೆ ಅದೊಂದು ವಿಜ್ಞಾನ. ಸತ್ಯವನ್ನು ಪರಿಚಯಿಸುವುದೇ ವಿಜ್ಞಾನ. ಭಾರತ ಆಧ್ಯಾತ್ಮಿಕ ಚಿಂತನೆಯ, ಸಾಧು-ಸಂತರ ದೇಶವಾಗಿದ್ದು ಆಧ್ಯಾತ್ಮಿಕವಾಗಿ ಸಾಧನೆ ಮಾಡಬಯಸುವ ಸಾವಿರಾರು ಜನರು ಭಾರತಕ್ಕೆ ಬರುತ್ತಿದ್ದಾರೆ. ವಿಪರ್ಯಾಸ ಸಂಗತಿ ಎಂದರೆ ಭಾರತೀಯರು ಪಾಶ್ಚಾತ್ಯ ಜೀವನಶೈಲಿ ಒಗ್ಗಿಸಿಕೊಂಡು ದೇಶದ ನಿಜವಾದ ಸಾರ್ಮಥ್ಯವನ್ನೇ ಮರೆತಿದ್ದಾರೆ ಎಂದರು.
ಭಾರತೀಯರ ಮನಸ್ಥಿತಿಯನ್ನು ಈ ಹಿಂದೆಯೇ ಅರಿತಿದ್ದ ಸ್ವಾಮಿ ವಿವೇಕಾನಂದರು ಯುವಕರನ್ನು ಕುರಿತು ಏಳಿ ಎದ್ದೇಳಿ ಎಂದು ಕರೆ ನೀಡಿದ್ದರು. ಆದರೆ, ಯುವಕರು ಭಾರತೀಯತೆಯನ್ನು ಮೈಗೂಡಿಸಿಕೊಳ್ಳದೆ, ಆಧ್ಯಾತ್ಮಿಕ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳದೆ ಪಾಶ್ಚಾತ್ಯ ಜೀವನಶೈಲಿಯೇ ಶ್ರೇಷ್ಠ ಎಂಬ ಮೌಢ್ಯದಲ್ಲಿ ಬದುಕುತ್ತಿದ್ದಾರೆ ಎಂದರು.
ತತ್ವಗಳು ಎಂದಿಗೂ ಸಾಯುವುದಿಲ್ಲ. ಅವು ಸಾರ್ವತ್ರಿಕವಾಗುತ್ತವೆ. ವಿಜ್ಞಾನವೂ ಒಂದು ಸಾರ್ವತ್ರಿಕ ತತ್ವದ ಆಧಾರದ ಮೇಲೆ ಬೆಳೆದಿರುವುದರಿಂದ ಅದು ಎಲ್ಲ ಕಾಲದಲ್ಲೂ ಅನ್ವಯಗೊಳ್ಳುತ್ತದೆ. ತತ್ವಗಳಿಲ್ಲದೆ ನಿಜವಾದ ವಿಕಾಸ ಸಾಧ್ಯವಿಲ್ಲ. ತತ್ವಗಳ ಮೇಲೆ ನಿಂತಿರುವ ಏಕೈಕ ಧರ್ಮವೇ ಸನಾತನ ಧರ್ಮವಾಗಿದೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net