ಕಾನಹೊಸಹಳ್ಳಿ ನಾಡಕಚೇರಿಯಲ್ಲಿ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಿಸಲಾಯಿತು. ಉಪ ತಹಸೀಲ್ದಾರ್ ಮದಿಲೇಟಿ, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಜಿ.ಸಿದ್ದನಗೌಡ, ಕಂದಾಯ ನಿರೀಕ್ಷಕ ಅಂದಾನಗೌಡ, ಗ್ರಾಮಲೆಕ್ಕಿಗ ಕೊಟ್ರೇಶ್, ಪ್ರಮುಖರಾದ ಇಮ್ರಾನ್, ಚನ್ನಬಸಯ್ಯ, ದೇವಿಂದ್ರನಾಯ್ಕ, ಸಂಪ್ರೀತಾ, ಮೋವಿನ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಉಪ ತಹಸೀಲ್ದಾರ್ ಮದಲೇಟಿ ಹೇಳಿಕೆ
ಸಂಗೊಳ್ಳಿ ರಾಯಣ್ಣ ಜಯಂತಿ
ಕಾನಹೊಸಹಳ್ಳಿ: ಬಡಕುಟುಂಬದಲ್ಲಿ ಜನಿಸಿದ ವೀರಪರಾಕ್ರಮಿ ಸಂಗೊಳ್ಳಿ ರಾಯಣ್ಣ, ಅಂಗ್ಲರ ವಿರುದ್ಧ ತೋರಿದ ಶೌರ್ಯ ಸಾಹಸದಿಂದ ಚರಿತ್ರೆಯಲ್ಲಿ ಸ್ಥಾನದ ಪಡೆದರು. ಇಂಥ ದೇಶಪ್ರೇಮಿ ಚಿಂತನೆಗಳು ಯುವಜನತೆಗೆ ಸ್ಪೂರ್ತಿ ಎಂದು ಉಪ ತಹಸೀಲ್ದಾರ್ ಮದಲೇಟಿ ಹೇಳಿದರು.
ನಾಡಕಚೇರಿಯಲ್ಲಿ ಶನಿವಾರ ಸಂಗೊಳ್ಳಿ ರಾಯಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅನ್ನ ನೀಡಿದ ಕಿತ್ತೂರು ಸಂಸ್ಥಾನದ ಮೇಲೆ ಅಂಗ್ಲರು ದಾಳಿ ಮಾಡಿದಾಗ ರಾಯಣ್ಣ ಅವರ ವಿರುದ್ಧ ಹೋರಾಟ ಮಾಡಿದರು. ಸಂಸ್ಥಾನದ ಉಳಿವಿಗಾಗಿ ಸಂಘಟಿತ ಹೋರಾಟ ಮಾಡಿದ ಫಲವಾಗಿ ಅಂಗ್ಲರ ಪಡೆಗೆ ಸೆರೆಸಿಕ್ಕು ಕೊನೆಗೆ ನೇಣುಗಂಬ ಹೇರಿ ಹುತಾತ್ಮನಾದ ಮಹಾನ್ ದೇಶ ಪ್ರೇಮಿ ರಾಯಣ್ಣ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಕೆ.ಜಿ.ಸಿದ್ದನಗೌಡ, ಮಾಜಿ ಉಪಾಧ್ಯಕ್ಷೆ ಲಕ್ಷೀ, ನಿವೃತ್ತ ಶಿಕ್ಷಕ ಕೊಟ್ರೇಶ್, ಮಹಾದೇವಪ್ಪ, ಹೇಮಂತ್, ಗ್ರಾಮಲೆಕ್ಕಿಗ ಕೋಟ್ರೇಶ್, ಪ್ರಮುಖರಾದ ಶ್ರೀನಿವಾಸ್‌ಕೊಂಡಿ, ಚನ್ನಬಸಯ್ಯ ಇಮ್ರಾನ್, ದೇವಿಂದ್ರನಾಯ್ಕ, ಸಂಪ್ರೀತಾ, ಮೋವಿನ, ಕೊಟ್ರೇಶ್, ಮಂಜುನಾಥ, ಸಿದ್ದೇಶ, ಇದ್ದರು.