ಕುಲಶಾಸ್ತ್ರೀಯ ಅಧ್ಯಯನ ಮಾಡಿಸಿ ಮರಾಠ ಸಮುದಾಯವನ್ನು 2ಎಗೆ ಸೇರಿಸಲು ಪ್ರಯತ್ನಿಸುವೆ. ಮರಾಠ ನಿಗಮದ ವ್ಯಾಪ್ತಿಗೆ ಕ್ಷತ್ರಿಯ ಮರಾಠ, ಅರೆ ಕ್ಷತ್ರಿಯ, ಆರ್ಯ ಮರಾಠ, ಆರ್ಯ ಕೊಂಕಣ ಮರಾಠ, ಕೃಷಿಯ ಮರಾಠ ಮತ್ತು ಕುಳವಾಡಿ ಜಾತಿಗಳು ಬರಲಿದ್ದು, ಇವರಿಗೆ ಸೌಲಭ್ಯ ಕಲ್ಪಿಸಲಾಗುವುದು. ಮರಾಠ ಸಮುದಾಯದ ಅಭಿವೃದ್ಧಿಗೆ ಜಲಭಾಗ್ಯ ಯೋಜನೆ (ಗಂಗಾ ಕಲ್ಯಾಣ), ಶಹಜೀರಾಜೇ ಸಮೃದ್ಧಿ ಸ್ವಯಂ ಉದ್ಯೋಗ, ಅರಿವು ಶೈಕ್ಷಣಿಕ ಸಾಲ ಯೋಜನೆ, ರಾಜಶ್ರೀ ಶಾಹುಮಹಾರಾಜ ವಿದೇಶಿ ಸಾಲ, ಮರಾಠ ಮಿಲ್ಟ್ರಿ ಹೋಟೆಲ್ ಸ್ಥಾಪನೆಗೆ ನೆರವು, ಸ್ವಯಂ ಉದ್ಯೋಗ ಸಾಲ ಯೋಜನೆ, ಹೊಲಿಗೆ ಯಂತ್ರ ವಿತರಣೆ ಯೋಜನೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.