ಸರ್ಕಾರಿ ಪಪೂ ಕಾಲೇಜು ಮಂಜೂರು ಮಾಡಲಿ

ಹಂಪಾಪಟ್ಟಣದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಆರಂಭಿಸಲು ಒತ್ತಾಯಿಸಿ ಸುತ್ತಲಿನ ಗ್ರಾಮಸ್ಥರು ಹಗರಿಬೊಮ್ಮನಹಳ್ಳಿಯಲ್ಲಿ ತಹಸೀಲ್ದಾರ್ ಆರ್.ಕವಿತಾಗೆ ಮನವಿ ಸಲ್ಲಿಸಿದರು. ಕರವೇ ತಾಲೂಕು ಅಧ್ಯಕ್ಷ ಬುಡ್ಡಿ ಬಸವರಾಜ, ಗೋಮಾತಾ ಟ್ರಸ್ಟ್ ಅಧ್ಯಕ್ಷ ಟಿ.ಕೊಟ್ರೇಶ, ಪ್ರಮುಖರಾದ ಬಿ.ನಾಗರಾಜ್, ಸಿ.ಎಲ್.ಕುಮಾರ್, ಸಿದ್ದರಗಾಳಪ್ಪ ಇತರರಿದ್ದರು.
ಹಂಪಾಪಟ್ಟಣದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಆರಂಭಿಸಲು ಒತ್ತಾಯಿಸಿ ಸುತ್ತಲಿನ ಗ್ರಾಮಸ್ಥರು ಹಗರಿಬೊಮ್ಮನಹಳ್ಳಿಯಲ್ಲಿ ತಹಸೀಲ್ದಾರ್ ಆರ್.ಕವಿತಾಗೆ ಮನವಿ ಸಲ್ಲಿಸಿದರು. ಕರವೇ ತಾಲೂಕು ಅಧ್ಯಕ್ಷ ಬುಡ್ಡಿ ಬಸವರಾಜ, ಗೋಮಾತಾ ಟ್ರಸ್ಟ್ ಅಧ್ಯಕ್ಷ ಟಿ.ಕೊಟ್ರೇಶ, ಪ್ರಮುಖರಾದ ಬಿ.ನಾಗರಾಜ್, ಸಿ.ಎಲ್.ಕುಮಾರ್, ಸಿದ್ದರಗಾಳಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಆರ್.ಕವಿತಾಗೆ ಮನವಿ
  • ಹಗರಿಬೊಮ್ಮನಹಳ್ಳಿ ಹಂಪಾಪಟ್ಟಣ ಸಾರ್ವಜನಿಕರು ಒತ್ತಾಯ
ಹಗರಿಬೊಮ್ಮನಹಳ್ಳಿ: ಹಂಪಾಪಟ್ಟಣದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಆರಂಭಿಸಬೇಕೆಂದು ಒತ್ತಾಯಿಸಿ ಸುತ್ತಲಿನ ಗ್ರಾಮಗಳ ಸಾರ್ವಜನಿಕರು ಕರವೇ ತಾಲೂಕು ಘಟಕದ ನೇತೃತ್ವದಲ್ಲಿ ತಹಸೀಲ್ದಾರ್ ಆರ್.ಕವಿತಾಗೆ ಮನವಿ ಸಲ್ಲಿಸಿದರು.
ಕರವೇ ತಾಲೂಕು ಅಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ, ಹಂಪಾಪಟ್ಟಣ ಎಂಟು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಇಲ್ಲಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕಾಗಿ 15ರಿಂದ 20ಕಿ.ಮೀ. ದೂರ ತೆರಳುವ ಅನಿವಾರ್ಯತೆ ಇದೆ. ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ವ್ಯವಸಾಯ ಸೇವಾ ಸಹಕಾರ ಸಂಘ, ಗ್ರಾಪಂ, ರೈಲ್ವೆ ನಿಲ್ದಾಣ, ಆಯುರ್ವೇದಿಕ್ ಆಸ್ಪತ್ರೆ ಇವೆ. ಆದರೆ, ಎಸ್ಸೆಸ್ಸೆಲ್ಸಿ ನಂತರದ ಶಿಕ್ಷಣಕ್ಕೆ ದೂರದ ಊರುಗಳಿಗೆ ಹೋಗಬೇಕು. ಅದಕ್ಕಾಗಿ ಈ ಗ್ರಾಮಕ್ಕೆ ಪದವಿಪೂರ್ವ ಕಾಲೇಜು ಮಂಜೂರು ಮಾಡಿ ಗ್ರಾಮೀಣ ಮಕ್ಕಳಿಗೆ ಅನುಕೂಲ ಕಲ್ಪಿಸಲಿ ಎಂದು ಒತ್ತಾಯಿಸಿದರು.
ಗೋಮಾತಾ ಟ್ರಸ್ಟ್ ಅಧ್ಯಕ್ಷ ಟಿ.ಕೊಟ್ರೇಶ ಮಾತನಾಡಿ, ಕಾಲೇಜ್ ಸ್ಥಾಪನೆಯಾದರೆ ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ. ಆದ್ದರಿಂದ ಶಾಸಕರು ಮುತುವರ್ಜಿವಹಿಸಲಿ ಎಂದರು.
ಪ್ರಮುಖರಾದ ಬಿ.ನಾಗರಾಜ್, ಸಿ.ಎಲ್.ಕುಮಾರ್, ಸಿದ್ದರಗಾಳಪ್ಪ, ಎನ್.ನಾಗರಾಜ, ಪತ್ರಿ ಯಲ್ಲಪ್ಪ, ಗಾಳಮ್ಮನವರ ಹುಲುಗಪ್ಪ, ಗುಬ್ಬೆರ್ ಅಂಜಿನಪ್ಪ, ಬಂಟರ ಕುಬೇರ, ಶಿಗೇನಹಳ್ಳಿ ಬಸವರಾಜ, ಕೆ.ಟಿ.ಮಂಜುನಾಥ್, ಎಚ್.ಕೆ.ರಮೇಶ್, ತೀರ್ಥಪ್ರಸಾದ್, ಹಂಪಿನಕಟ್ಟಿ ಪ್ರವೀಣ, ಉಪ್ಪಾರ್ ಹನುಮಂತಪ್ಪ, ಗೊಂದಲಿ ಪಕೀರಪ್ಪ. ಸಿದ್ದರ ಎಲ್ಲಪ್ಪ. ಎಚ್.ಅಶೋಕ. ಕೆ.ನಜೀರಸಾಬ್, ವಡ್ಡರ ಹಾಲಪ್ಪ, ವಾಜೀತ್, ಬಿ.ಕೆ.ಬಸವರಾಜ್, ಕುಮಾರ್ ಮೊದಲಿಯಾರ್, ಸೋಮನಾಥ ಭಜಂತ್ರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net