ಗ್ರಾಮೀಣ ಬದುಕೇ ಜನಪದ ಸಾಹಿತ್ಯದ ಮೂಲ

ಹರಪನಹಳ್ಳಿಯಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕಸಾಪ ತಾಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಉದ್ಘಾಟಿಸಿದರು. ಪ್ರಾಚಾರ್ಯ ಆರ್.ಎಚ್.ಕಲ್ಯಾಣದವರ್, ಸಾರಿಗೆ ಸಂಚಾರಿ ನಿಯಂತ್ರಕ ಬಿ.ಎಂ.ನಾಗರಾಜ, ಕಸಾಪ ತಾಲೂಕು ಕಾರ್ಯದರ್ಶಿ ಜಿ.ಮಹದೇವಪ್ಪ, ಗೌರವ ಕೋಶಾಧಿಕಾರಿ ಕೆ.ರಾಘವೇಂದ್ರ ಶೆಟ್ಟಿ, ಮುಖ್ಯಶಿಕ್ಷಕ ಎಚ್.ಬಸವರಾಜ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಉಪನ್ಯಾಸಕ ಎಚ್.ಮಲ್ಲಿಕಾರ್ಜುನ ಅನಿಸಿಕೆ
  • ದತ್ತಿ ಉಪನ್ಯಾಸ ಕಾರ್ಯಕ್ರಮ
ಹರಪನಹಳ್ಳಿ: ಆಧುನಿಕ ಅಬ್ಬರದಲ್ಲಿ ಪ್ರಸ್ತುತ ಜನಮಾನಸದಿಂದ ದೂರ ಉಳಿಯುತ್ತಿರುವ ಜನಪದ ಕಲೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಕಸಾಪ ಮಾಡುತ್ತಿದೆ ಎಂದು ಕನ್ನಡ ಉಪನ್ಯಾಸಕ ಎಚ್.ಮಲ್ಲಿಕಾರ್ಜುನ ಹೇಳಿದರು.
ನಗರದಲ್ಲಿ ಕಸಾಪ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಬಾರಿಕರ ಅಂಬಮ್ಮ ಮತ್ತು ಹನುಮಂತಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವ ಪೀಳಿಗೆಗೆ ಭವಿಷ್ಯದ ಹಿತದೃಷ್ಟಿಯಿಂದ ಜನಪದ ಸಾಹಿತ್ಯ ಹಾಗೂ ಕಲೆಯ ಅರಿವಿನ ಅಗತ್ಯವಿದೆ. ಗ್ರಾಮೀಣ ಜನರ ಬದುಕೇ ಜನಪದ ಸಾಹಿತ್ಯದ ಮೂಲ. ಪೂರ್ವಜರು ಸಾಹಿತ್ಯದ ಮೂಲಕ ಮೌಲ್ಯಗಳನ್ನು ಪಸರಿಸುತ್ತಿದ್ದರು ಎಂದರು.
ವಕೀಲ ಕಣಿವಿಹಳ್ಳಿ ಮಂಜುನಾಥ ಮಾತನಾಡಿ, ನಾಡಿನಲ್ಲಿ ಶತಮಾನಗಳ ಕಾಲ ಆಳ್ವಿಕೆ ನಡೆಸಿರುವ ಪಾಳೆಗಾರರ ಕುರಿತು ಸಮಗ್ರ ಅಧ್ಯಯನ ನಡೆಸಬೇಕು. ಸಣ್ಣ ಪುಟ್ಟ ಸಂಸ್ಥಾನಗಳ ಕೊಡುಗೆಗಳ ಮೇಲೆ ಬೆಳಕು ಚೆಲ್ಲಿದಾಗ ಇತಿಹಾಸದ ದೃಷ್ಠಿಕೋನ ಬದಲಾಗಲಿದೆ. ಕನ್ನಡ ನಾಡು ನುಡಿ ಬಗ್ಗೆ ಎಲ್ಲರೂ ಪ್ರೀತಿ-ಗೌರವ ಹೊಂದಿದರೆ ಕನ್ನಡ ಉಳಿಯಲಿದೆ ಎಂದು ತಿಳಿಸಿದರು. ಕಸಾಪ ತಾಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಪ್ರಮುಖ ಗುಂಡಗತ್ತಿ ಕೊಟ್ರಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net