ಸಂಡೂರಿನಲ್ಲಿ ಪ್ರತ್ಯೇಕ ಆರ್‌ಒ ಕಚೇರಿಯನ್ನು ಆರಂಭಿಸಲು ಒತ್ತಾಯಿಸಿ ದಲಿತ ಸೇನಾ ತಾಲೂಕು ಅಧ್ಯಕ್ಷ ಎಚ್.ಮಲಿಯಪ್ಪ ನೇತೃತ್ವದಲ್ಲಿ ತಾಲೂಕು ಕಚೇರಿ ಶಿರಸ್ತೇದಾರ್ ಕೆ.ಎಂ.ಶಿವಕುಮಾರ್‌ಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಹನುಮಂತಪ್ಪ, ಹೊಸಳ್ಳಿ ತಾಯಪ್ಪ, ದೇವರ ಮನೆ ನಾಗಪ್ಪ, ಶಬ್ಬೀರ್ ಇತರರಿದ್ದರು.
ಸಂಡೂರು: ಪಟ್ಟಣದಲ್ಲಿ ಪ್ರತ್ಯೇಕ ಆರ್‌ಟಿಒ ಕಚೇರಿಯನ್ನು ಆರಂಭಿಸಲು ಒತ್ತಾಯಿಸಿ ದಲಿತ ಸೇನಾ ತಾಲೂಕು ಅಧ್ಯಕ್ಷ ಎಚ್.ಮಲಿಯಪ್ಪ ನೇತೃತ್ವದಲ್ಲಿ ತಾಲೂಕು ಕಚೇರಿ ಶಿರಸ್ತೇದಾರ್ ಕೆ.ಎಂ.ಶಿವಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
ಸಂಡೂರಿನಲ್ಲಿ ಐದು ಸಾವಿರಕ್ಕೂ ಹೆಚ್ಚು ಲಾರಿಗಳಿದ್ದು, 11 ಸಾವಿರ ಲಾರಿ ಚಾಲಕರಿದ್ದಾರೆ. ಚಾಲಕರು ಪ್ರಮಾಣ ಪತ್ರಕ್ಕಾಗಿ ಹುಬ್ಬಳ್ಳಿ, ಧಾರವಾಡ, ಬೀದರ್, ಮೈಸೂರು, ಬೆಂಗಳೂರು ಹೀಗೆ ಹಲವೆಡೆ ಸುಮಾರು 450 ರಿಂದ 500ಕಿಮೀವರೆಗೆ ತೆರಳುವ ಸ್ಥಿತಿಯಿದೆ.
ಚಾಲಕರ ಪ್ರಮಾಣ ಪತ್ರಕ್ಕೆ ತಿರುಗಾಡಬೇಕಾದರೆ ಹಣವೂ ಖರ್ಚಾಗುತ್ತದೆ. ಇಲ್ಲಿ ಅತೀ ಹೆಚ್ಚು ಗಣಿಗಾರಿಕೆ ಕಂಪನಿಗಳಿದ್ದು ಚಾಲಕರಿಗೆ ಡಿಎಲ್ ಸೇರಿ ಅಗತ್ಯ ಪ್ರಮಾಣ ಪಡೆಯುವುದು ಬಹಳ ಸಮಸ್ಯೆಯಾಗಿದೆ. ಆದ್ದರಿಂದ ಸಂಡೂರಿನಲ್ಲೇ ಪ್ರತ್ಯೇಕ ಆರ್‌ಟಿಒ ಕಚೇರಿಯನ್ನು ಸ್ಥಾಪಿಸಬೇಕೆಂದು ಮನವಿ ಮಾಡಿದರು ಎಂದರು.