ಕುರುಗೋಡು ತಾಲೂಕಿನ ಬಾದನಹಟ್ಟಿಯಲ್ಲಿ ತೆರಿಗೆ ವಸೂಲಾತಿ ಆಂದೋಲನ ನಡೆಯಿತು. ಪಿಡಿಒ ಅನಿಲ್, ಸಿಬ್ಬಂದಿ ಬೊಳಾಡಯ್ಯ ಸ್ವಾಮಿ, ಮೇಟಿ ಆಗಲೂರಪ್ಪ, ಹನುಮಂತ ರೆಡ್ಡಿ, ದಿಡ್ಡಿ ಕರೆಪ್ಪ, ವಿರೂಪಾಕ್ಷಿ ಇತರರಿದ್ದರು.
ಕುರುಗೋಡು: ಬಾದನಹಟ್ಟಿ ಗ್ರಾಪಂ ವ್ಯಾಪ್ತಿಯ ಪ್ರತಿಯೊಬ್ಬರೂ ತೆರಿಗೆ ಪಾವತಿಸಿ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಪಿಡಿಒ ಅನಿಲ್ ಕುಮಾರ್ ಮನವಿ ಮಾಡಿದರು.
ಬಾದನಹಟ್ಟಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ತೆರಿಗೆ ಆಂದೋಲನದಲ್ಲಿ ಮನೆ ಮನೆಗೆ ಭೇಟಿ ನೀಡಿ ತೆರಿಗೆ ಸಂಗ್ರಹಿಸಿ ಮಾತನಾಡಿದರು. ಪ್ರತಿಯೊಬ್ಬರೂ ಸ್ವಯಂಪ್ರೇರಣೆಯಿಂದ ತೆರಿಗೆ ಪಾವತಿಗೆ ಮುಂದಾಗಬೇಕು.
ಸಕಾಲಕ್ಕೆ ತೆರಿಗೆ ಸಂಗ್ರಹವಾದರೆ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕೈಗೊಳ್ಳಲು ಮತ್ತು ಸಿಬ್ಬಂದಿ ವೇತನ ನೀಡಲು ಸಹಾಯವಾಗುತ್ತದೆ. ಗ್ರಾಮದಲ್ಲಿ ಒಟ್ಟು 10. 82ಲಕ್ಷ ರೂ. ತೆರಿಗೆ ಬಾಕಿ ಇದೆ. ಸಾರ್ವಜನಿಕರಿಂದ ನೀರು, ಕಟ್ಟಡ ಹಾಗೂ ಇತರ ಬಾಕಿ ಇರುವ ತೆರಿಗೆ ಪೈಕಿ 6.38ಲಕ್ಷ ರೂ. ಸಂಗ್ರಹಿಸಲಾಗಿದೆ ಎಂದರು.