ದುಂಡು ಮೇಜಿನ ಸಭೆ ಮೇ.24

ರಾಘವೇಂದ್ರ ಕುಷ್ಟಗಿ
ರಾಘವೇಂದ್ರ ಕುಷ್ಟಗಿ
Published on

ಪ್ರಮುಖ ಮುಖ್ಯಾಂಶಗಳು

  • ಅಭಿವೃದ್ಧಿ
ಬಳ್ಳಾರಿ : ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ ದಿನೇದಿನೆ ಮಾನವ ಅಭಿವೃದ್ಧಿಯ ಸೂಚ್ಯಂಕ ಕುಸಿಯುತ್ತಿದೆ. ಈ ಹಿನ್ನೆಲೆ ಮೇ.24ರಂದು ರಾಯಚೂರಿನ ಎಸ್‌ಎಲ್‌ವಿ ಹೊಟೇಲ್‌ನಲ್ಲಿ 371(ಜೆ) ಹೋರಾಟಗಾರರ ಸಮಾವೇಶ ಹಾಗೂ ದುಂಡು ಮೇಜಿನ ಸಭೆ ಆಯೋಜಿಸಲಾಗಿದೆ ಎಂದು ಸಮಾವೇಶದ ಸಂಚಾಲಕ ರಾಘವೇಂದ್ರ ಕುಷ್ಟಗಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಸಮಾವೇಶದಲ್ಲಿ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರು ಸೇರಿ ನಲವತ್ತು ಅಧಿಕ ಜನಪ್ರತಿನಿಧಿಗಳು ಭಾಗವಹಿಸುವ ವಿಶ್ವಾಸವಿದೆ. ಇದರ ಜತೆ ಈ ಭಾಗದ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ವಿಕಾಸ ವೇದಿಕೆ ಸ್ಥಾಪನಾ ಸಮಾರಂಭ ನಡೆಸಲಾಗುವುದು ಎಂದು ಹೇಳಿದರು.
ಈ ಪ್ರದೇಶದ ಸರ್ವತೋಮುಖ ಅಭಿವೃದ್ಧಿಯ ಕನಸು ಕಂಡು ಸಂವಿಧಾನ 371(ಜೆ) ಕಲಂಗೆ ತಿದ್ದುಪಡಿಗಾಗಿ ಹೋರಾಡಿದ ಹೋರಾಟಗಾರರ ಆಸೆಗಳು ನುಚ್ಚುನೂರಾಗಿವೆ. ಆರು ಜಿಲ್ಲೆಗಳ ಶಾಸಕರು ಹಾಗೂ ಸಂಸದರು ಜವಾಬ್ದಾರಿ ಮರೆತಿದ್ದಾರೆ. ಇದಲ್ಲದೆ, ಕಳೆದ 12 ವರ್ಷಗಳಲ್ಲಿ ಕೆಕೆಆರ್‌ಡಿಬಿಗೆ ಸರ್ಕಾರದಿಂದ 20 ಸಾವಿರ ಕೋಟಿ ರೂ. ಹಣ ಮಂಜೂರಾಗಿದ್ದು, ಇದರಲ್ಲಿ ಕೇವಲ ಶೇ.40ಕ್ಕಿಂತ ಕಡಿಮೆ ಅನುದಾನಕ್ಕೆ ಕ್ರಿಯಾಯೋಜನೆ ಮಾತ್ರ ಸಲ್ಲಿಸಿದೆ. ಉಳಿದ ಹಣ ಬಳಸಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.
ನಮ್ಮ ಭಾಗದ ಜನರ ಜೀವನದ ಆಸ್ಮಿತೆಯ ಪ್ರಶ್ನೆ ಇರುವುದರಿಂದ ಪ್ರತ್ಯೇಕವಾಗಿ ಜಿಲ್ಲೆಯಿಂದ 50 ಜನರಂತೆ 300 ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಸಮಾವೇಶದಲ್ಲಿ ಭಾಗವಹಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಇದರ ಜತೆಗೆ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ, ವಾಣಿಜ್ಯೋದ್ಯಮ ಸಂಘ, ಸಹಮತ ವೇದಿಕೆ , ಕರ್ನಾಟಕ ರೈತ ಸಂಘ ಸೇರಿದಂತೆ ನಾನಾ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು. ನಾನಾ ಸಂಘಟನೆಯ ಪದಾಧಿಕಾರಿಗಳಾದ ಸಿಎ ಪನ್ನರಾಜ್, ಕರೂರು ಮಾಧವರೆಡ್ಡಿ, ಚಾಗನೂರು ಮಲ್ಲಿಕಾರ್ಜುನರೆಡ್ಡಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net