ಎಲ್ಲ ಕೊಠಡಿಗಳ ಛಾವಣಿ ದುರಸ್ತಿಗೊಳಿಸಲಿ

ಕಂಪ್ಲಿ ಪಟ್ಟಣದ ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ಸಭೆ ನಡೆಸಿದರು.
ಕಂಪ್ಲಿ ಪಟ್ಟಣದ ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ಸಭೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರೌಢಶಾಲೆ ಹಳೆಯ ವಿದ್ಯಾರ್ಥಿಗಳ ಆಗ್ರಹ
  • ಕಂಪ್ಲಿ ಷಾ.ಮಿಯಾಚಂದ್ ಸರ್ಕಾರಿ ಶಾಲೆ ಸಭೆ
ಕಂಪ್ಲಿ: ಪಟ್ಟಣದ ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಕಟ್ಟಡದ ಒಂದು ಕೊಠಡಿ ಛಾವಣಿ ದುರಸ್ತಿಗೆ 9.80 ಲಕ್ಷ ರೂ. ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಶುಕ್ರವಾರ ಸಭೆ ನಡೆಸಿ 14 ಕೊಠಡಿಗಳ ಛಾವಣಿಗಳನ್ನು ದುರಸ್ತಿಗೊಳಿಸಬೇಕು ಎಂದು ಶಿಕ್ಷಣ ಇಲಾಖೆಯನ್ನು ಆಗ್ರಹಿಸಿದರು.
ಹಳೆಯ ವಿದ್ಯಾರ್ಥಿ ಟಿ.ಎಚ್.ಎಂ.ರಾಜಕುಮಾರ್ ಮಾತನಾಡಿ, ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ 1945ರಲ್ಲಿ ಸ್ಥಾಪನೆಗೊಂಡಿದ್ದು, ಪ್ರಸ್ತುತ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಕೊಠಡಿಗಳ ಛಾವಣಿ ಸಂಪೂರ್ಣ ಶಿಥಿಲಗೊಂಡಿರುವುದರಿಂದ ಕಾಲೇಜಿನ ಕೊಠಡಿಗಳಲ್ಲಿ ಪಾಠ ಮಾಡಲಾಗುತ್ತಿದೆ. ಒಂದು ಕೊಠಡಿಗೆ ಸರ್ಕಾರದ ಅನುದಾನದೊಂದಿಗೆ ದಾನಿಗಳ ಸಹಕಾರದಿಂದ ಉಳಿದ ಎಲ್ಲ ಕೊಠಡಿಗಳಿಗೆ ಛಾವಣಿಗೆ ಮಂಗಳೂರು ಹೆಂಚು ಅಳವಡಿಸಲು ಶಿಕ್ಷಣ ಇಲಾಖೆ ಅನುಮತಿ ನೀಡಬೇಕೆಂದರು.
ಉಪ ಪ್ರಾಚಾರ್ಯೆ ಸುಜಾತಾ, ಎಸ್‌ಡಿಎಂಸಿ ಅಧ್ಯಕ್ಷ ಎನ್.ವೀರೇಶ್, ಹಳೆಯ ವಿದ್ಯಾರ್ಥಿಗಳಾದ ವಿದ್ಯಾಶಂಕರ್, ಪ್ರಹ್ಲಾದ, ಡಿ.ಎಚ್.ಎಂ.ಶರಣಬಸವ, ಇಸಿಒ ಟಿ.ಎಂ.ಬಸವರಾಜ, ಡಾ.ಸುನೀಲ್ ಬಿ. ಇತರರಿದ್ದರು. ಏ.6ರಂದು ‘ಛಾವಣಿ ಶಿಥಿಲ ವಿದ್ಯಾರ್ಥಿಗಳ ಪರದಾಟ’ ಶೀರ್ಷಿಕೆಯಡಿ ‘ವಿಜಯವಾಣಿ’ಯಲ್ಲಿ ವರದಿ ಪ್ರಕಟಗೊಂಡಿತ್ತು. ಇದರಿಂದಾಗಿ ಒಂದು ಕೊಠಡಿ ಛಾವಣಿ ದುರಸ್ತಿಗೆ 9.80 ಲಕ್ಷ ರೂ. ಬಿಡುಗಡೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net