ಪೊಲೀಸರಿಂದ ರಸ್ತೆ ದುರಸ್ತಿ ಕಾರ್ಯ

ಹೂವಿನಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿ ಪೊಲೀಸರು ರಸ್ತೆ ದುರಸ್ತಿ ಮಾಡುತ್ತಿರುವುದು. ಪಿಎಸ್‌ಐ ಜೆ.ಕೆ.ಅಬ್ಬಾಸ್, ಎಎಸ್‌ಐ ವೆಂಟೇಶ್, ಪಿಸಿ ಸಂಗಜ್ಜ ಇದ್ದರು.
ಹೂವಿನಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿ ಪೊಲೀಸರು ರಸ್ತೆ ದುರಸ್ತಿ ಮಾಡುತ್ತಿರುವುದು. ಪಿಎಸ್‌ಐ ಜೆ.ಕೆ.ಅಬ್ಬಾಸ್, ಎಎಸ್‌ಐ ವೆಂಟೇಶ್, ಪಿಸಿ ಸಂಗಜ್ಜ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕರು ಮೆಚ್ಚುಗೆ
ಹೂವಿನಹಡಗಲಿ: ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿನ ರಾಜ್ಯ ಹೆದ್ದಾರಿಯ ಗುಂಡಿ ಮುಚ್ಚುವ ಮೂಲಕ ಇಟ್ಟಿಗಿ ಪೊಲೀಸರು ಮಾದರಿಯಾಗಿದ್ದಾರೆ. ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಇರುವ ಇಟ್ಟಿಗಿ ಪೊಲೀಸ್ ಠಾಣೆ ವ್ಯಾಪ್ತಿಯ ರಸ್ತೆಯಲ್ಲಿ ದೊಡ್ಡ ಪ್ರಮಾಣದ ಗುಂಡಿಗಳು ನಿರ್ಮಾಣವಾಗಿ ವಾಹನ ಸವಾರರಿಗೆ ಸಮಸ್ಯೆಯಾಗಿತ್ತು. ಅಲ್ಲದೆ ಬೈಕ್ ಸವಾರರು ಗುಂಡಿಗಳನ್ನು ತಪ್ಪಿಸಲು ಪ್ರಯತ್ನಿಸಿ ಅಪಘಾತಗಳು ಸಂಭವಿಸಿವೆ. ಆದ್ದರಿಂದ ಪೊಲೀಸರು ಗ್ರಾಮಸ್ಥರ ಸಹಾಯದಿಂದ ಗುಂಡಿಗಳನ್ನು ಮುಚ್ಚುವ ಮೂಲಕ ರಸ್ತೆ ದುರಸ್ತಿ ಕಾರ್ಯ ನಡೆಸಿದ್ದಾರೆ. ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net