ಗ್ರಾಮಸ್ಥರಿಂದಲೇ ರಸ್ತೆ ದುರಸ್ತಿ

ಸಿರಿಗೇರಿ ಗ್ರಾಮದ ಹುಚ್ಚೇಶ್ವರ ನಗರದಿಂದ ಕ್ಯಾದಿಗೆಹಾಳು ಮಾರ್ಗದ ರಸ್ತೆ ದುರಸ್ತಿಕಾರ್ಯ ಮಾಡುತ್ತಿರುವ ಗ್ರಾಮಸ್ಥರು.
ಸಿರಿಗೇರಿ ಗ್ರಾಮದ ಹುಚ್ಚೇಶ್ವರ ನಗರದಿಂದ ಕ್ಯಾದಿಗೆಹಾಳು ಮಾರ್ಗದ ರಸ್ತೆ ದುರಸ್ತಿಕಾರ್ಯ ಮಾಡುತ್ತಿರುವ ಗ್ರಾಮಸ್ಥರು.
Published on

ಪ್ರಮುಖ ಮುಖ್ಯಾಂಶಗಳು

  • ಅಭಿವೃದ್ಧಿಗೆ ಗಮನ ಹರಿಸದ ಅಧಿಕಾರಿಗಳು
  • ಫಸಲು ಸಾಗಿಸುವಾಗ ಹರಸಾಹಸ

ಸಿರಿಗೇರಿ: ಹುಚ್ಚೇಶ್ವರ ನಗರದಿಂದ ಕ್ಯಾದಿಗೆಹಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಲವಾರು ವರ್ಷಗಳಿಂದ ತಗ್ಗುಗಳಿಂದ ಕೂಡಿತ್ತು. ಈವರೆಗೂ ರಸ್ತೆ ಅಭಿವೃದ್ಧಿಗೆ ಯಾರೂ ಮುಂದಾಗಿರಲಿಲ್ಲ. ನಿತ್ಯ ನೂರಾರು ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಹಾಗೂ ಸಿರಿಗೇರಿಯಿಂದ ಹೊಲಕ್ಕೆ ಹೋಗುವ ರೈತರು ಈ ರಸ್ತೆಯಲ್ಲಿ ಓಡಾಡುತ್ತಾರೆ.

ಫಸಲು ಸಾಗಿಸುವಾಗ ಹರಸಾಹಸ ಪಡಬೇಕಾಗಿದೆ. ಮಳೆ ಬಂದಾಗ ತಗ್ಗುಗಳಲ್ಲಿ ನೀರು ನಿಂತು ದಾರಿ ಕಾಣದೆ ಅಪಘಾತಗಳಾಗಿವೆ. ಆದ್ದರಿಂದ ಗ್ರಾಮಸ್ಥರೆ ಸ್ವಂತ ಹಣದಲ್ಲಿ ರಸ್ತೆ ದುರಸ್ತಿ ಕಾರ್ಯ ಮಾಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ರಸ್ತೆ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಮುಖರಾದ ಏಳುಬೆಂಚೆ ಮಲ್ಲಿಕಾರ್ಜುನಗೌಡ, ಗೋಡೆ ಶಂಕ್ರಪ್ಪ ಪಟ್ಟಣಶೆಟ್ಟಿ, ವೀರೇಶಪ್ಪ ಪೇಟೆಗೌಡ್ರು ಎರಪ್ಪ, ಉಳ್ಳಾಗಡ್ಡೆ ಬಸವನಗೌಡ, ಪೇಟೆಗೌಡ್ರು ಪಂಪನಗೌಡ, ದೇವರ ಮನೆ ನಾಗರಾಜ, ಉಪ್ಪಾರ ತಿಮ್ಮಪ್ಪ, ಎರ‌್ರಿಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net